`ಗಿಣಿ ಹೇಳಿದ ಕಥೆ' ಸಿನಿಮಾದಲ್ಲಿ ಪಂಚಿಂಗ್ ಡೈಲಾಗ್ಸ್

`ಗಿಣಿ ಹೇಳಿದ ಕಥೆ' ಸಿನಿಮಾದಲ್ಲಿ ಪಂಚಿಂಗ್ ಡೈಲಾಗ್ಸ್

Rajath Shetty   ¦    Jan 10, 2019 04:12:54 PM (IST)
`ಗಿಣಿ ಹೇಳಿದ ಕಥೆ' ಸಿನಿಮಾದಲ್ಲಿ ಪಂಚಿಂಗ್ ಡೈಲಾಗ್ಸ್

ಈಗಾಗಲೇ ಸಾಕಷ್ಟು ವಿಚಾರದಲ್ಲಿ ಕುತೂಹಲ ಮೂಡಿಸಿರುವ "ಗಿಣಿ ಹೇಳಿದ ಕಥೆ" ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೆ ನಾಳೆ(ಜ.11) ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಚಿತ್ರದ ಹೈಲೈಟ್ ಅಂದ್ರೆ ಪಂಚಿಂಗ್ ಡೈಲಾಗ್. ಚಿತ್ರದಲ್ಲಿ ಸಾಕಷ್ಟು ಪಂಚಿಂಗ್ ಡೈಲಾಗ್ ಇದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲು ಎರಡು ಮಾತಿಲ್ಲ.

ಆಂಗ್ಲ ಭಾಷೆಗಳು ಸೇರಿದಂತೆ ಚಿತ್ರ ವಿಚಿತ್ರ ಟೈಟಲ್ಲುಗಳೇ ಹೆಚ್ಚಾಗಿ ರಾರಾಜಿಸ್ತಿರುತ್ತವೆ. ಅಂಥಾದ್ದರ ನಡುವೆ ಅಪ್ಪಟ ಕನ್ನಡದ ಶೀರ್ಷಿಕೆಯೊಂದು ಬಂದರೆ, ಅದು ವಿಶಿಷ್ಟವಾಗಿದ್ದರೆ ಪ್ರೇಕ್ಷಕರ ಚಿತ್ತ ಅದರತ್ತ ಕದಲದಿರುತ್ತಾ?
ಹಾಗೆಯೇ ಸದ್ಯ ಎಲ್ಲರನ್ನು ಸೆಳೆದುಕೊಂಡಿರೋ ಚಿತ್ರ ಗಿಣಿ ಹೇಳಿದ ಕಥೆ! ರಂಗಭೂಮಿಯಲ್ಲಿ ನಟರಾಗಿ ಗುರುತಿಸಿಕೊಂಡಿದ್ದ ದೇವ್ ರಂಗಭೂಮಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದ ನಾಯಕನಾಗಿಯೂ ಅವರೇ ನಟಿಸಿದ್ದಾರೆ. ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ನಾಗರಾಜ್ ಉಪ್ಪುಂದ ನಿರ್ದೇಶನದ ಈ ಚಿತ್ರದ ಟೀಸರ್ ಅನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ಹೊಸಾ ತಂಡದ ಹೊಸಾ ಕನಸಿಗೆ ಸಾಥ್ ನೀಡಿದ್ದಾರೆ. ವರ್ಷಾಂತರಗಳಿಂದಲೂ ರಂಗಭೂಮಿಯ ಸಾಹಚರ್ಯ ಹೊಂದಿರುವವರು ದೇವ್. ಅವರು ತಮ್ಮ ಹೆಸರಿನ ಮುಂದೆ ರಂಗಭೂಮಿ ಎಂಬುದನ್ನೂ ಸೇರಿಸಿಕೊಂಡಿರೋದೇ ಅವರ ಪ್ರೀತಿ ಎಂಥಾದ್ದೆಂಬುದನ್ನು ಸಾರುವಂತಿದೆ.

ಹಳ್ಳಿ ಸೊಗಡಿನಲ್ಲಿಯೇ ಕಥೆ ಚಲಿಸೋದು ಗಿಣಿ ಹೇಳಿದ ಕಥೆಯ ಪ್ರಧಾನ ಗುಣಲಕ್ಷಣ. ಇದರ ನಾಯಕನ ಮನಸ್ಥಿತಿಯೂ ಅದಕ್ಕೆ ಪೂರಕವಾಗಿಯೇ ಇರುತ್ತೆ. ಹತ್ತಿರವಿದ್ದರೂ ನಾಯಕಿಯ ನಡುವೆ ಒಂದು ಅಂತರ ಕಾಯ್ದುಕೊಂಡೇ ಪ್ರೀತಿಸೋದು ಅದರ ಸ್ಪೆಷಾಲಿಟಿ. ಚಿತ್ರದುದ್ದಕ್ಕೂ ಒಂದು ಸಾರಿಯೂ ನಾಯಕ ನಾಯಕಿಯನ್ನು ಮುಟ್ಟೋದಿಲ್ಲವಂತೆ. ಆದರೆ ಅದೊಂದು ಸಲ ಮುಟ್ಟೋ ಸಂದರ್ಭ ಬರುತ್ತೆ. ಅದರ ಪರಿಣಾಮ ಏನಾಗುತ್ತೆ ಅನ್ನೋದು ಕೂಡಾ ಈ ಚಿತ್ರದ ಟ್ವಿಸ್ಟುಗಳಲ್ಲೊಂದು. ನಾಗರಾಜ್ ಉಪ್ಪುಂದ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗ್ಲೇ ಟೀಸರ್, ಹಾಡುಗಳ ಮೂಲಕ ಗಿಣಿಯ ಹವಾ ಪ್ರೇಕ್ಷಕ ವಲಯದಲ್ಲಿ ಜೋರಾಗಿದೆ. ಎಲ್ಲರೂ ಕಥೆ ಹೇಳಲು ಬಂದ ಗಿಣಿಯತ್ತ ಕುತೂಹಲದ ಕಣ್ಣು ನೆಟ್ಟಿದ್ದಾರೆ. ಅಷ್ಟಕ್ಕೂ ಈ ಗಿಣಿ ಯಾವ ಥರದ ಕಥೆ ಹೇಳಲಿದೆ ಎಂಬುದು ಎಲ್ಲರ ಕೌತುಕದ ಮೂಲ. ಇವೆಲ್ಲ ನಾವು ಮಾತಿನಲ್ಲಿ ನಿರ್ಧಾರ ಮಾಡದೆ ಸಿನಿಮಾ ವನ್ನು ಚಿತ್ರಮಂದಿರದಲ್ಲಿ ಹೋಗಿ ನೋಡಿ ನಿಮ್ಮ ಎಲ್ಲ ಪ್ರಶ್ನೆಗೂ ಅಲ್ಲೇ ಉತ್ತರ ಸಿಗುತ್ತದೆ ಎಂದು ದೇವ್ ರಂಗಭೂಮಿ ತಿಳಿಸಿದ್ದಾರೆ. ಕನ್ನಡದಲ್ಲಿ ಈಗ ಹೊಸಥರದ ಪ್ರಯೋಗ ದ ಚಿತ್ರದಲ್ಲಿ ಒಂದಾದ `ಗಿಣಿ ಹೇಳಿದ ಕಥೆ' ಎಲ್ಲರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.