ಭುಜದ ಶಸ್ತ್ರಚಿಕಿತ್ಸೆಗಾಗಿ ಶಿವರಾಜ್ ಕುಮಾರ್ ಲಂಡನ್ ಗೆ

ಭುಜದ ಶಸ್ತ್ರಚಿಕಿತ್ಸೆಗಾಗಿ ಶಿವರಾಜ್ ಕುಮಾರ್ ಲಂಡನ್ ಗೆ

YK   ¦    Jun 13, 2019 10:11:29 AM (IST)
ಭುಜದ ಶಸ್ತ್ರಚಿಕಿತ್ಸೆಗಾಗಿ ಶಿವರಾಜ್ ಕುಮಾರ್ ಲಂಡನ್ ಗೆ

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರು ತಮ್ಮ ಭುಜದ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಲಿದ್ದಾರೆ.

ಈ ಮೂಲಕ ತನ್ನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆಎ. ಜುಲೈ 12ರಂದು ಶಿವರಾಜ್ ಕುಮಾರ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಜುಲೈ 6ರಂದು ಲಂಡನ್ ಗೆ ತೆರಳಲಿದ್ದು ಜುಲೈ 21ರಂದು ವಾಪಾಸ್ ಆಗಲಿದ್ದಾರೆ.

ಈ ಸಂಬಂಧ ಶಿವಣ್ಣ ಪ್ರತಿಕ್ರಿಯಿಸಿ, ಚಿಕಿತ್ಸೆ ದೃಷ್ಟಿಯಿಂದ ನಾನು ಈ ಬಾರಿಯ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.

ಇವರು ಕಳೆದ ಕೆಲವು ದಿನಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದಾರೆ.