ನಟಿ ರಾಗಿಣಿ ದ್ವಿವೇದಿ ಇಂದು ಬಿಜೆಪಿಗೆ ಸೇರ್ಪಡೆ

ನಟಿ ರಾಗಿಣಿ ದ್ವಿವೇದಿ ಇಂದು ಬಿಜೆಪಿಗೆ ಸೇರ್ಪಡೆ

YK   ¦    Apr 14, 2019 10:34:04 AM (IST)
ನಟಿ ರಾಗಿಣಿ ದ್ವಿವೇದಿ ಇಂದು ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯ ನಾಯಕ ಮುರುಳೀಧರ್ ರಾವ್ ಅವರು ರಾಗಿಣಿಯ ಅವರನ್ನು ಪಕ್ಷಕ್ಕೆ ಸ್ವಾಗತಿಸಲಿದ್ದಾರೆ.

ಮೂಲಗಳ ಪ್ರಕಾರ ದು ಮಧ್ಯಾಹ್ನ 12 ಗಂಟೆಗೆ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಆ ಬಳಿಕ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ರಾಗಿನಿ ಅವರು ವೀರಮದಕರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು, ಆ ನಂತರ ಕೆಂಪೇಗೌಡ, ರಾಗಿನಿ ಐಪಿಎಸ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.