ದಕ್ಷ ಅಧಿಕಾರಿಯ ನೈಜ ಕಥೆಯೇ ಈ ಚಂಬಲ್

ದಕ್ಷ ಅಧಿಕಾರಿಯ ನೈಜ ಕಥೆಯೇ ಈ ಚಂಬಲ್

Rajath Shetty   ¦    Feb 19, 2019 05:14:30 PM (IST)
ದಕ್ಷ ಅಧಿಕಾರಿಯ ನೈಜ ಕಥೆಯೇ ಈ ಚಂಬಲ್

ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಫೆಬ್ರವರಿ 22ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ನಟಿಸಿರೋದು ಸೋನು ಗೌಡ. 

ಇದುವರೆಗೂ ವಿಶಿಷ್ಟವಾದ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದಿರೋ ಸೋನುಗೆ ಚಂಬಲ್‍ನಲ್ಲಿಯೂ ಅಂಥದ್ದೇ ಪಾತ್ರ ಸಿಕ್ಕಿದೆ. ಆದ್ರೆ ಅದು ಯಾವ ಥರದ್ದು, ಅದಕ್ಕೂ ಬೆಚ್ಚಿ ಬೀಳಿಸೋ, ಬೆರಗಾಗಿಸೋ ಶೇಡುಗಳಿವೆಯಾ? ಎಂಬೆಲ್ಲ ವಿಚಾರಗಳನ್ನು ಗುಟ್ಟಾಗಿಯೇ ಇಡಲಾಗಿದೆ. ಆದರೆ ಸೋನು ಅವತಾರವಿಲ್ಲಿ ಸಂಪೂರ್ಣ ಬದಲಾಗಿದೆ ಅನ್ನೋ ವಿಚಾರ ಪಕ್ಕಾ.

ಈ ಸಿನಿಮಾಗೆ ಜ್ಯೂಡಾ ಸಾಂಡಿ ಸಂಗೀತ ನಿರ್ದೇಶನ ಮಾಡಿದ್ರೆ ಜಯಂತ ಕಾಯ್ಕಿಣಿ, ಸಿಂಪಲ್ ಸುನಿ ಸಾಹಿತ್ಯ ಬರೆದಿದ್ದಾರೆ. ಜಂಬೆ, ಅಚ್ಯುತ ಕುಮಾರ್, ಕಿಶೋರ್, ರೋಜರ್ ನಾರಾಯಣ್, ಪವನ್ ಕುಮಾರ್, ಸರ್ದಾರ್ ಸತ್ಯ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಜೇಕಬ್ ವರ್ಗಿಸ್ ನಿರ್ದೇಶನ ಮಾಡಿದ್ದಾರೆ. ಇದೇ 22 ರಂದು ರಿಲೀಸ್ ಆಗಲಿದೆ.