ತೆಲುಗಿನ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

ತೆಲುಗಿನ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

HSA   ¦    Feb 06, 2019 12:04:34 PM (IST)
ತೆಲುಗಿನ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

ಹೈದರಾಬಾದ್: ತೆಲುಗಿನ ಕಿರುತೆರೆ ನಟಿ ನಾಗಾ ಜಾನ್ಸಿ ಅವರು ಬುಧವಾರ ಹೈದರಾಬಾದ್ ನಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

21 ಹರೆಯದ ಜಾನ್ಸಿ ಅವರು ತಾನು ವಾಸವಾಗಿದ್ದ ಶ್ರೀನಗರ ಕಾಲನಿಯ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಫ್ಲ್ಯಾಟ್ ನಲ್ಲಿ ನಟಿ ಏಕಾಂಗಿಯಾಗಿದ್ದರು. ಆಕೆಯ ಸೋದರ ದುರ್ಗಾ ಪ್ರಸಾದ್ ಬಂದು ಬಾಗಿಲು ಬಡಿದಾಗ, ತೆರೆಯದೇ ಇದ್ದಾಗ ಆತ ನೆರೆಮನೆಯವರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾನೆ. ಇದರ ಬಳಿಕ ಬಾಗಿಲು ಒಡೆದು ಒಳಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಆಕೆಯ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪುಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಿಂದ ಬಂದಿರುವ ಜಾನ್ಸಿ, ಮಾ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರ ಬಂಧನ ಧಾರಾವಾಹಿಯಲ್ಲಿ ನಟಿಸಿದ್ದರು. ಕಳೆದ ಕೆಲವು ತಿಂಗಳಿಂದ ಅವರು ಅಮೀರ್ ಪೇಟ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್ ಆರಂಭಿಸಿದ್ದರು.