'ಯಜಮಾನ' ಚಿತ್ರದ ಟ್ರೇಲರ್ ರಿಲೀಸ್: ಮಾ.1 ರಂದು ತೆರೆಗೆ

'ಯಜಮಾನ' ಚಿತ್ರದ ಟ್ರೇಲರ್ ರಿಲೀಸ್: ಮಾ.1 ರಂದು ತೆರೆಗೆ

YK   ¦    Feb 10, 2019 03:48:21 PM (IST)
 'ಯಜಮಾನ' ಚಿತ್ರದ ಟ್ರೇಲರ್ ರಿಲೀಸ್: ಮಾ.1 ರಂದು ತೆರೆಗೆ

ಹಾಡಿನ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆಯಾಗಿ 30ನಿಮಿಷಕ್ಕೆ 3ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಣೆ ಮಾಡಿದ್ದಾರೆ.

ಚಿತ್ರ ಮಾರ್ಚ್ 1ರಂದು ತೆರೆಗೆ ಬರಲಿದ್ದು ಭಾರೀ ನಿರೀಕ್ಷೆಯನ್ನು ಹುಟ್ಟಿಸುತ್ತಿದೆ. ಇದು ದರ್ಶನ್ ಅವರ 51ನೇ ಸಿನಿಮಾವಾಗಿದ್ದು ಟ್ರೇಲರ್ ನಲ್ಲಿ ಯಜಮಾನ ಲುಕ್ ನಲ್ಲಿ ದರ್ಶನ್ ಖಡಕ್ ಡೈಲಾಗ್ ಮೂಲಕ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ.

ಚಿತ್ರವನ್ನು ಫೋನ್ ಕುಮಾರ್ ಹಾಗೂ ವಿ.ಹರಿಕೃಷ್ಣ ನಿರ್ದೇಶನ ಮಾಡಿದ್ದು, ಶೈಲಜಾ ನಾಗ್ ಹಾಗೂ ಬಿ.ಸುರೇಶ್ ಅವರು ನಿರ್ಮಾಣ ಮಾಡಿದ್ದಾರೆ.

ದರ್ಶನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ನಟಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದ್ದು ರವಿಶಂಕರ್, ಡಾಲಿ ಧನಂಜಯ್, ಠಾಕೂರ್ ಅನುಪ್ ಸಿಂಗ್, ದೇವರಾಜ್, ಸಾಧುಕೋಕಿಲ, ಶಿವರಾಜ್ ಕೆ.ಆರ್. ಪೇಟೆಯಂತಹ ಅದ್ಭುತ ಕಲಾವಿದರು ಇದ್ದಾರೆ.

https://www.youtube.com/watch?v=A65l7LrbAQg