ವಿದ್ಯಾರ್ಥಿಗಳ ಸಮ್ಮುಖದಲ್ಲಿ `ಕಾಲೇಜ್ ಕುಮಾರ್' ಚಿತ್ರದ ಹಾಡು ಬಿಡುಗಡೆ

ವಿದ್ಯಾರ್ಥಿಗಳ ಸಮ್ಮುಖದಲ್ಲಿ `ಕಾಲೇಜ್ ಕುಮಾರ್' ಚಿತ್ರದ ಹಾಡು ಬಿಡುಗಡೆ

LK   ¦    Oct 10, 2017 12:42:46 PM (IST)
ವಿದ್ಯಾರ್ಥಿಗಳ ಸಮ್ಮುಖದಲ್ಲಿ `ಕಾಲೇಜ್ ಕುಮಾರ್' ಚಿತ್ರದ ಹಾಡು ಬಿಡುಗಡೆ

ಎಂ.ಆರ್.ಪಿಕ್ಚರ್ಸ್ ಲಾಂಛನದಲ್ಲಿ ಎಲ್.ಪದ್ಮನಾಭ್ ಅವರು ನಿರ್ಮಿಸುತ್ತಿರುವ, ಹರಿ ಸಂತೋಷ್(ಅಲೆಮಾರಿ ಸಂತು) ನಿರ್ದೇಶನದ `ಕಾಲೇಜ್ ಕುಮಾರ್ ಚಿತ್ರದ `ಲಾಸ್ಟ್ ಬೆಂಚ್ ಬಾಯ್ಸ್ ಎಂಬ ಮೊದಲ ಹಾಡನ್ನು ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಸಿನಿಮಾಗಳ ಹಾಡುಗಳು ಸಂಗೀತ ಪ್ರಿಯರ ಮನಸೆಳೆಯುತ್ತಿವೆ. ಬಹಳಷ್ಟು ಸಿನಿಮಾಗಳು ಬಿಡುಗಡೆಗೆ ಮುನ್ನವೇ ಹಾಡುಗಳ ಮೂಲಕ ಜನರನ್ನು ತಲುಪುತ್ತಿವೆ. ಇದೀಗ `ಕಾಲೇಜ್ ಕುಮಾರ್ ಚಿತ್ರದ ಹಾಡು ಕೂಡ ಚಿತ್ರ ಪ್ರೇಮಿಗಳು ಇಷ್ಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ, ನಿರ್ದೇಶಕ ಹರಿ ಸಂತೋಷ್ ರಚಿಸಿರುವ `ಲಾಸ್ಟ್ ಬೆಂಚ್ ಬಾಯ್ಸ್ ಎಂಬ ಈ ಹಾಡನ್ನು ಅಲೋಕ್, ವ್ಯಾಸರಾಜ್ ಹಾಗೂ ವಾಸುಕಿ ವೈಭವ್ ಹಾಡಿದ್ದಾರೆ. ಹಾಡು ಬಿಡುಗಡೆಯ ಕಾರ್ಯಕ್ರಮದಲ್ಲಿ ನಟ ರವಿಶಂಕರ್, ನಾಯಕ ವಿಕ್ಕಿ ವರುಣ್(ಕೆಂಡಸಂಪಿಗೆ), ನಟಿ ಸಂಯುಕ್ತ ಹೆಗಡೆ, ನಿರ್ಮಾಪಕ ಎಲ್.ಪದ್ಮನಾಭ್, ನಿರ್ದೇಶಕ ಹರಿ ಸಂತೋಷ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ಅಲೋಕ್, ವ್ಯಾಸರಾಜ್, ವಾಸುಕಿ ವೈಭವ್ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಜರಿದ್ದರು.

ಚಿತ್ರಕ್ಕೆ ಎ.ಅನಘನ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದ್ದು, ತಾರಾಗಣದಲ್ಲಿ ವಿಕ್ಕಿ ವರುಣ್, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಅಚ್ಯುತ ಕುಮಾರ್ ಮೊದಲಾದವರು ಇದ್ದಾರೆ.

More Images