ಫೆ.21ರಂದು ನಟ ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷ ಘೋಷಣೆ

ಫೆ.21ರಂದು ನಟ ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷ ಘೋಷಣೆ

MY   ¦    Jan 17, 2018 03:10:12 PM (IST)
ಫೆ.21ರಂದು ನಟ ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷ  ಘೋಷಣೆ

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಹೊಸ ಪಕ್ಷ ಕಟ್ಟುವ ನಿರ್ಧಾರ ಈಗಾಗಲೇ ಹೇಳಿದ್ದು, ಇದೀಗ ಪಕ್ಷದ ಹೆಸರನ್ನು ಫೆಬ್ರವರಿ 21ರಂದು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಹೆಸರನ್ನು ಘೋಷಣೆ ಮಾಡಿದ ದಿನವೇ ತಮ್ಮ ಪಕ್ಷದ ಸಿದ್ಧಾಂತಗಳು, ಗುರಿಗಳೇನು ಎಂಬುದನ್ನು ಅವರು ಹೇಳಲಿದ್ದಾರೆ. ಹಾಗೆಯೇ ತಮಿಳುನಾಡಿನಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.

ತಿಳಿದುಬಂದ ಮೂಲಗಳ ಪ್ರಕಾರ ನಟ ಕಮಲ್ ಹಾಸನ್ ಅವರ ಊರಾದ ರಾಮನಾಥಪುರಂನಿಂದಲೇ ಅವರ ರಾಜ್ಯ ಪ್ರವಾಸ ಆರಂಭವಾಗಲಿದೆ. ನಂತರ ಮಧುರೈ, ದಿಂಡಿಗುಲ್ ಮತ್ತು ಶಿವಗಂಗೈ ಗಳಲ್ಲಿ ಜನರ ಜತೆ ಸಂವಾದವನ್ನು ನಡೆಸಲಿದ್ದಾರೆ.