ಬೇಗ ಗುಣಮುಖರಾಗಿ ಗೆಳೆಯ: ದರ್ಶನ್ ಗೆ ಕಿಚ್ಚ ಸುದೀಪ್ ಹಾರೈಕೆ

ಬೇಗ ಗುಣಮುಖರಾಗಿ ಗೆಳೆಯ: ದರ್ಶನ್ ಗೆ ಕಿಚ್ಚ ಸುದೀಪ್ ಹಾರೈಕೆ

YK   ¦    Sep 25, 2018 10:40:34 AM (IST)
ಬೇಗ ಗುಣಮುಖರಾಗಿ ಗೆಳೆಯ: ದರ್ಶನ್ ಗೆ ಕಿಚ್ಚ ಸುದೀಪ್ ಹಾರೈಕೆ

ಬೆಂಗಳೂರು: ಸೋಮವಾರ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಬೇಗನೇ ಚೇತರಿಸಿಕೊಂಡು ಗುಣಮುಖವಾಗಿ ಬರಲಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ಹಾರೈಸಿದ್ದಾರೆ.

ಟ್ವೀಟ್ ನಲ್ಲಿ ಏನಿದೆ: ನೀವು ಚೆನ್ನಾಗಿದ್ದೀರ ಎಂದು ತಿಳಿಯಿತು. ಗೆಟ್ ವೆಲ್ ಸೂನ್ ಮೈ ಫ್ರೆಂಡ್ ಎಂದು ಬರೆದುಕೊಂಡಿದ್ದಾರೆ.

ಸೋಮವಾರ ಮುಂಜಾನೆ ಮೈಸೂರು ಹೊರವಲಯದ ರಿಂಗ್ ರೋಡ್‌ನ ಹಿನಕಲ್‌ ಬಳಿ ನಡೆದ ಕಾರು ಅಪಘಾತದಲ್ಲಿ ನಟ ದರ್ಶನ್ ಜತೆ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಗಾಯಗೊಂಡು ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತದಲ್ಲಿ ದರ್ಶನ್ ಗೆ ಬಲಗೈ ಮೂಳೆ ಮುರಿದಿದ್ದು, ಅವರಿಗೆ ಸೋಮವಾರವೇ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಅದಲ್ಲದೆ ನಟ ದೇವರಾಜ್ ಕೈ ಬೆರಳುಗಳು ಮೂಳೆ ಮುರಿತವಾಗಿದ್ದು ಅವರಿಗೂ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಭದ್ರತೆ ದೃಷ್ಟಿಯಲ್ಲಿ ಆಸ್ಪತ್ರೆ ಸುತ್ತಾ ಮುತ್ತಾ ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

ದರ್ಶನ್ ಅಭಿಮಾನಿಗಳಲ್ಲಿ ಮನವಿ: `ಎಲ್ಲರಿಗೂ ನಮಸ್ಕಾರಪ್ಪ. ನನ್ನ ಅನ್ನದಾತರು, ಅಭಿಮಾನಿಗಳಲ್ಲಿ ನನ್ನದೊಂದು ರಿಕ್ವೆಸ್ಟ್. ದಯವಿಟ್ಟು ನನಗೆ ಏನೂ ಆಗಿಲ್ಲ. ಆರಾಮಾಗಿರಿ. ಇನ್ನು ಒಂದು ದಿನ ಆಸ್ಪತ್ರೆಯಲ್ಲಿದ್ದು, ನಾಳೆ ಬರುತ್ತೇನೆ. ಆ ಬಳಿಕ ಎಲ್ಲರಿಗೂ ಸಿಗುತ್ತೇನೆ. ಹೀಗಾಗಿ ದಯವಿಟ್ಟು ಯಾರೂ ಆಸ್ಪತ್ರೆಯತ್ತ ಬರಬೇಡಿ. ಇದೊಂದು ನನ್ನ ಮನವಿ ಅಂತಾನೇ ತಿಳಿದುಕೊಳ್ಳಿ. ಯಾಕಂದ್ರೆ ಬೇರೆ ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆ. ಒಟ್ಟಿನಲ್ಲಿ ಎಲ್ಲರೂ ಆರಾಮಾಗಿರಿ. ನಿಮ್ಮ ದರ್ಶನ್ ಗೆ ಏನೂ ಆಗಿಲ್ಲ. ಧನ್ಯವಾದ ಅಂತ ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.