ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿಗೆ ಸೇರ್ಪಡೆ

ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿಗೆ ಸೇರ್ಪಡೆ

HSA   ¦    Apr 23, 2019 03:15:36 PM (IST)
ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಮಂಗಳವಾರ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಯಾದರು.

ಸನ್ನಿ ಡಿಯೋಲ್ ಅವರು ಪಂಜಾಬ್ ನ ಗುರುದಾಸ್ಪುರದಿಂದ ಲೋಕಸಭೆಗೆ ಸ್ಪರ್ಧಿಸಲಿರುವರು ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿಜೆಪಿ ನಾಯಕಿ ಹಾಗೂ ಗೃಹ ಸಚಿವೆ ನಿರ್ಮಲಾ ಸೀತಾರಾಮನ್, ಪಿಯೂಸ್ ಗೋಯಲ್, ಕ್ಯಾಪ್ಟನ್ ಅಭಿಮನ್ಯು ಮತ್ತು ಇತರರು ಸನ್ನಿ ಡಿಯೋಲ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ನಾನು ಇಂದು ಇಲ್ಲಿಗೆ ಕೆಲಸ ಮಾಡಲು ಬಂದಿರುವೆನು ಮತ್ತು ನಾನು ಮೋದಿಜಿ ಅವರಿಗೆ ಬೆಂಬಲ ನೀಡುತ್ತೇನೆ. ನನ್ನ ಕೆಲಸವು ಎಲ್ಲವನ್ನು ಮಾತನಾಡಲಿದೆ ಎಂದು ಡಿಯೋಲ್ ಮಾಧ್ಯಮದವರಿಗೆ ತಿಳಿಸಿದರು.

ಸನ್ನಿ ಡಿಯೋಲ್ ಅವರ ತಂದೆ ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಅವರು ಕೂಡ ಬಿಜೆಪಿಯಲ್ಲಿದ್ದಾರೆ.