ಇದೇ 29ರಂದು 'ಫೈಲ್ವಾನ್' ಚಿತ್ರ ಅಖಾಡಕ್ಕೆ ಬರಲು ಸಿದ್ಧ

ಇದೇ 29ರಂದು 'ಫೈಲ್ವಾನ್' ಚಿತ್ರ ಅಖಾಡಕ್ಕೆ ಬರಲು ಸಿದ್ಧ

YK   ¦    Jul 16, 2019 03:49:45 PM (IST)
ಇದೇ 29ರಂದು 'ಫೈಲ್ವಾನ್' ಚಿತ್ರ ಅಖಾಡಕ್ಕೆ ಬರಲು ಸಿದ್ಧ

ನಟ ಸುದೀಪ್ ಅಭಿನಯನದ ಬಹುನಿರೀಕ್ಷಿತ ಚಿತ್ರ ಫೈಲ್ವಾನ್ ಇದೇ 29ರಂದು ತೆರೆ ಮೇಲೆ ಬರಲಿದೆ ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ.

ಚಿತ್ರತಂಡ ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿದೆ. ಜುಲೈ 27ರಂದು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ಚಿತ್ರ ಒಟ್ಟು ಐದು ಭಾಷೆಯಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿದ್ದು, ಚಂದನವನದಲ್ಲಿ ಸೇರಿದಂತೆ ಇತರ ಚಿತ್ರರಂಗದಲ್ಲೂ ಭಾರೀ ಕುತೂಹಲವನ್ನು ಹುಟ್ಟಿಸಿದೆ. ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷಾ ಸಿಂಗ್ ಅವರು ಜೋಡಿಯಾಗಿದ್ದಾರೆ.

ತಾರಾಗಣದಲ್ಲಿದ್ದಾರೆ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಅವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.