ಅಭಿಮಾನಿಯ ಕೊನೆ ಆಸೆ ಈಡೇರಿಸಿ ರಿಯಲ್ ಹೀರೋ ಆದ ಕಿಚ್ಚ ಸುದೀಪ್

ಅಭಿಮಾನಿಯ ಕೊನೆ ಆಸೆ ಈಡೇರಿಸಿ ರಿಯಲ್ ಹೀರೋ ಆದ ಕಿಚ್ಚ ಸುದೀಪ್

YK   ¦    Dec 07, 2017 03:14:25 PM (IST)
ಅಭಿಮಾನಿಯ ಕೊನೆ ಆಸೆ ಈಡೇರಿಸಿ ರಿಯಲ್ ಹೀರೋ ಆದ ಕಿಚ್ಚ ಸುದೀಪ್

ಬೆಂಗಳೂರು: ಸಾವಿನ ಅಂಚಿನಲ್ಲಿರುವ ಅಭಿಮಾನಿಯೊಬ್ಬರ ಕೊನೆಯ ಆಸೆಯನ್ನು ಈಡೇರಿಸುವ ಮೂಲಕ ಕಿಚ್ಚ ಸುದೀಪ್ ಇದೀಗ ತೆರೆ ಮೇಲೆ ಮಾತ್ರವಲ್ಲ ರಿಯಲ್ ನಲ್ಲಿಯೂ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ. ಸುದೀಪ್ ಅಭಿಮಾನಿಯಾದ ವಿನುತಾ ಎಂಬವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.

ಈಚೆಗೆ ಇವರಿಗೆ ಕ್ಯಾನ್ಸರ್ ಉಲ್ಬಣಗೊಂಡು ನಾಲ್ಕನೆಯ ಹಂತ ತಲುಪಿದ್ದು ಬದುಕುವ ಸಾಧ್ಯತೆ ತುಂಬಾ ಕಮ್ಮಿ ಎಂದು ವೈದ್ಯರು ತಿಳಿಸಿದ್ದರು. ಈ ವೇಳೆ ವನಿತಾ ತನ್ನ ಕೊನೆಯ ಆಸೆಯಾಗಿ ಕಿಚ್ಚ ಸುದೀಪ್ ಅವರನ್ನು ನೋಡಬೇಕು ಎನ್ನುವ ಆಸೆಯನ್ನು ಹೇಳಿಕೊಂಡಿದ್ದರು.

ಇದನ್ನು ತಿಳಿದ ಕಿಚ್ಚಾ ಸುದೀಪ್ ಸೇನಾ ಸಮಿತಿಯು ನಟ ಸುದೀಪ್ ಅವರಿಗೆ ಹೇಳಿತ್ತು. ವಿಷಯ ತಿಳಿದ ನಂತರ ಸುದೀಪ್ ವಿನುತಾ ಕೊನೆಯಾಸೆಯಂತೆ ಅವರನ್ನು ಭೇಟಿ ಮಾಡಿ. ಕೆಲಹೊತ್ತು ಅವರ ಜತೆ ಮಾತನಾಡಿ ಸಮಯವನ್ನು ಕಳೆದರು.


 

More Images