ರಾಧಿಕಾ ಪಂಡಿತ್ ಮತ್ತೆ ಅಮ್ಮನಾಗುತ್ತಿದ್ದಾರೆ...

ರಾಧಿಕಾ ಪಂಡಿತ್ ಮತ್ತೆ ಅಮ್ಮನಾಗುತ್ತಿದ್ದಾರೆ...

HSA   ¦    Jun 26, 2019 05:30:06 PM (IST)
ರಾಧಿಕಾ ಪಂಡಿತ್ ಮತ್ತೆ ಅಮ್ಮನಾಗುತ್ತಿದ್ದಾರೆ...

ಬೆಂಗಳೂರು: ನಟ ಯಶ್ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಪತ್ನಿ ರಾಧಿಕಾ ಪಂಡಿತ್ ಅಮ್ಮನಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಯಶ್ ಮಗಳ ನಾಮಕರಣವು ಕಳೆದ ಭಾನುವಾರ ನಡೆದಿತ್ತು. ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದರು.

ಟ್ವೀಟ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಯಶ್ ಅವರು ತನ್ನ ಜತೆ ಆಡಲು ಇನ್ನೊಂದು ಮಗು ಬರ್ತಿದೆ ಎನ್ನುವಂತೆ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಈಗ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ. ಇದೇ ಟ್ವೀಟ್ ನ್ನು ರಾಧಿಕಾ ಪಂಡಿತ್ ಅವರು ಕೂಡ ಹಂಚಿಕೊಂಡಿದ್ದಾರೆ.