ಹಣ ವಂಚನೆ ಆರೋಪ: ಲತಾ ರಜನಿಕಾಂತ್ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

ಹಣ ವಂಚನೆ ಆರೋಪ: ಲತಾ ರಜನಿಕಾಂತ್ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

YK   ¦    Jul 10, 2018 05:22:46 PM (IST)
 ಹಣ ವಂಚನೆ ಆರೋಪ: ಲತಾ ರಜನಿಕಾಂತ್ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

ಚೆನ್ನೈ: ಚಿತ್ರ ವಿತರಕ ಸಂಸ್ಥೆಗೆ ನೀಡಬೇಕಿದ್ದ 6.20 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿರುವ ಆರೋಪ ಎದುರಿಸುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರ ವಿರುದ್ಧದ ವಿಚಾರಣೆಗೆ ಮಂಗಳವಾರ ಸಮ್ಮತಿ ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಸದ್ಯ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ದೂರನ್ನು ಆರಂಭಿಕ ಹಂತದಲ್ಲೇ ಹೈಕೋರ್ಟ್ ರದ್ದುಗೊಳಿಸಬಾರದು ಎಂದೂ ತಿಳಿಸಿದೆ.

ಘಟನೆ ಹಿನ್ನೆಲೆ: 2014ರಲ್ಲಿ  ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿನಯಿಸಿದ್ದ ಚಿತ್ರವೊಂದನ್ನು ತಮಿಳುನಾಡಿನಲ್ಲಿ ವಿತರಿಸುವ ಹಕ್ಕು ಪಡೆದಿದ್ದ ಸಂಸ್ಥೆ ಲತಾ ರಜನಿಕಾಂತ್ ಅವರಿಂದ ಬರಬೇಕಿದ್ದ ಬಾಕಿ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿತ್ತು. ಬಾಕಿ ಸಂದಾಯ ಮಾಡದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಸಮ್ಮಿತಿಸಿದೆ.