ಭಾರತದ ಗೆಲುವನ್ನು ಸಂಭ್ರಮಿಸಿದ ತೈಮೂರ್: ಪೋಟೋ ವೈರಲ್

ಭಾರತದ ಗೆಲುವನ್ನು ಸಂಭ್ರಮಿಸಿದ ತೈಮೂರ್: ಪೋಟೋ ವೈರಲ್

YK   ¦    Jun 17, 2019 02:38:09 PM (IST)
ಭಾರತದ ಗೆಲುವನ್ನು ಸಂಭ್ರಮಿಸಿದ ತೈಮೂರ್: ಪೋಟೋ ವೈರಲ್

ಹುಟ್ಟಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ನಟ ಸೈಫ್ ಅಲಿಖಾನ್ – ಕರೀನಾ ಕಪೂರ್ ದಂಪತಿಯ ಪುತ್ರ ತೈಮೂರ್ ಅಲಿ ಖಾನ್ ಮತ್ತೇ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹೃದಯವನ್ನು ಕದ್ದಿದ್ದಾರೆ.

ಭಾನುವಾರ ಪಾಕ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯಾಟದಲ್ಲಿ ಭಾರತ 89ರನ್ ಗಳ ಭರ್ಜರಿ ಜಯವನ್ನು ಸಂಭ್ರಮಿಸಿದ ತೈಮೂರ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದ ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ ಸೆಲ್ಯೂಟ್ ಹೊಡೆಯುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಸೆಲೆಬ್ರಿಟಿಯಾಗಿರುವ ತೈಮೂರ್ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.

ಕರೀನಾ ಟ್ವೀಟ್ ಮಾಡಿದ ಪೋಟೋದಲ್ಲಿ ‘ಒಂದು ಪ್ರೀತಿ, ಒಂದು ಹೃದಯ ಭಾರತಕ್ಕಾಗಿ’ ಎಂದು ಬರೆದುಕೊಂಡಿದ್ದಾರೆ.

ರಜೆಯಲ್ಲಿರುವ ತೈಮೂರ್ ಇದೀಗ ತಾಯಿ ಕರೀನಾ ಕಪೂರ್ ಜತೆ ಲಂಡನ್ ನಲ್ಲಿ ಮಸ್ತಿ ಮಾಡುತ್ತಿಒದ್ದಾರೆ.

ಭಾನುವಾರ ಮ್ಯಾಚೇಸ್ಟೋದಲ್ಲಿ ನಡೆದ ಪಾಕಿಸ್ತಾನ ಹಾಗೂ ಭಾರತ ನಡುವಿನ ವಿಶ್ವಕಪ್ ಪಂದ್ಯಾಟದಲ್ಲಿ ಭಾರತ 89ರನ್ ಗಳ ಭರ್ಜರಿ ಜಯವನ್ನು ಸಾಧಿಸಿತು.