ರಾಣು ಮಂಡಲ್ ವರ್ತನೆಗೆ ಕಿಡಿಕಾರಿದ ಅಭಿಮಾನಿಗಳು

ರಾಣು ಮಂಡಲ್ ವರ್ತನೆಗೆ ಕಿಡಿಕಾರಿದ ಅಭಿಮಾನಿಗಳು

YK   ¦    Nov 05, 2019 10:41:16 AM (IST)
ರಾಣು ಮಂಡಲ್ ವರ್ತನೆಗೆ ಕಿಡಿಕಾರಿದ ಅಭಿಮಾನಿಗಳು

ನವದೆಹಲಿ: ಸಾಮಾಜಿಕ ಜಾಲತಾಣದ ಮೂಲಕ ರಾತ್ರಿ ಕಳೆದು ಬೆಳಿಗ್ಗೆ ಆಗುವುದರೊಳಗೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಗಾಯಕಿ ರಾಣು ಮಂಡಲ್ ಅವರು ಇದೀಗ ಟೀಕೆಗೆ ಗುರಿಯಾಗಿದ್ದಾರೆ.

ಮಾಲ್ ವೊಂದರಲ್ಲಿ ನಿಂತಿದ್ದ ರಾಣು ಮಂಡಲ್ ಅವರನ್ನು ಮಹಿಳೆಯೊಬ್ಬರು ಮುಟ್ಟಿ ಸೆಲ್ಫಿ ಕೇಳುತ್ತಾರೆ.ಇದರಿಂದ ಕೋಪಗೊಂಡ ರಾಣು ಅವರು ಮಹಿಳೆಗೆ ಮುಟ್ಟಿ ಯಾಕೆ ಮಾತನಾಡಿಸುತ್ತೀರಿ ಎಂದು ಗದರಿದ್ದಾರೆ.

  ರಾಣು ಮಂಡಲ್ ಕೋಪದಿಂದಲೇ ಮಾತನಾಡುವುದು ವಿಡಿಯೋದಲ್ಲಿ ನೋಡಬಹುದು.  ಈ ವಿಡಿಯೋ ಯಾವಾಗ ಸೆರೆಯಾಗಿದೆ ಎಂಬುದು ಹಾಗೂ ರಾಣು ಯಾಕೆ ಈ ರೀತಿ ವರ್ತಿಸಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ರಾಣು ಮಂಡಲ್ ಅವರ ವರ್ತನೆಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ.