ಅಂಬಿ ಸಮಾಧಿಗೆ ಹಾಲು-ತುಪ್ಪ ಅರ್ಪಣೆ: ಪತ್ನಿ ಸುಮಲತ, ಮಗ ಅಭಿ ಭಾಗಿ

ಅಂಬಿ ಸಮಾಧಿಗೆ ಹಾಲು-ತುಪ್ಪ ಅರ್ಪಣೆ: ಪತ್ನಿ ಸುಮಲತ, ಮಗ ಅಭಿ ಭಾಗಿ

YK   ¦    Dec 04, 2018 11:55:00 AM (IST)
ಅಂಬಿ ಸಮಾಧಿಗೆ ಹಾಲು-ತುಪ್ಪ ಅರ್ಪಣೆ: ಪತ್ನಿ ಸುಮಲತ, ಮಗ ಅಭಿ ಭಾಗಿ

ಬೆಂಗಳೂರು: ಮಾಜಿ ಸಚಿವ, ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಗಲಿ ಇಂದಿಗೆ 11 ದಿನವಾಗಿದ್ದು ಕುಟುಂಬಸ್ಥರು ಸೂತಕ ಕಳೆದುಕೊಳ್ಳುವ ಶಾಸ್ತ್ರ ಆಚರಿಸಿದ್ದು ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ಹಾಲು, ತುಪ್ಪ ಅರ್ಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಈ ವೇಳೆ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಅವರೊಂದಿಗೆ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಇದ್ದರು. ಈ ವೇಳೆ ಅಪಾರ ಅಭಿಮಾನಿಗಳು ಕೇಶಮುಂಡನೆ ಮಾಡಿ ಅಭಿಮಾನ ಮೆರೆದರು.