ಮುದ್ದಾದ ಮಗಳಿಗೆ ಐರಾ ಎಂದು ಹೆಸರಿಟ್ಟ ಯಶ್-ರಾಧಿಕಾ

ಮುದ್ದಾದ ಮಗಳಿಗೆ ಐರಾ ಎಂದು ಹೆಸರಿಟ್ಟ ಯಶ್-ರಾಧಿಕಾ

YK   ¦    Jun 24, 2019 12:12:00 PM (IST)
ಮುದ್ದಾದ ಮಗಳಿಗೆ ಐರಾ ಎಂದು ಹೆಸರಿಟ್ಟ ಯಶ್-ರಾಧಿಕಾ

ಬೆಂಗಳೂರು: ರಾಕಿಂಗ್ ದಂಪತಿ ಯಶ್-ರಾಧಿಕಾ ತಮ್ಮ ಮುದ್ದಾದ ಮಗಳಿಗೆ ಭಾನುವಾರ ಐರಾ ಎಂದು ಕುಟುಂಬದವರ ಸಮ್ಮುಖದಲ್ಲಿ ನಾಮಕರಣ ಮಾಡಿದ್ದಾರೆ.

ಯಶ್- ರಾಧಿಕಾ ಮಗಳಿಗೆ ಅಭಿಮಾನಿಗಳು ಯಶಿಕಾ ಎಂದು ಹೆಸರಿಡಲು ಸೂಚಿಸಿದ್ದರು. ಈಚೆಗೆ ಯಶ್ ದಂಪತಿ 6ತಿಂಗಳು ತುಂಬಿದ ಮುದ್ದು ಮಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದರು. ಅದರಕಲ್ಲಿ ವೈಆರ್ ಎಂದು ಹೆಸರು ಬರೆದುಕೊಂಡಿದ್ದರು. ಭಾನುವಾರ ಬೆಂಗಳೂರಿನ ಹೊಟೇಲ್ ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಇದೀಗ ಕೆಜಿಎಫ್ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ರಾಧಿಕಾ ಅವರು ತಾಯಿಯಾದ ಬಳಿಕ ಸಿನಿಮಾದಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡು ಮಗಳ ಜತೆ ಕಳೆಯುತ್ತಿದ್ದಾರೆ.