ಐದು ಕೋಟಿ ಸಾಲ ಪಡೆದು ವಂಚನೆ: ನಟ ರಾಜ್ ಪಾಲ್ ತಪ್ಪಿತಸ್ಥ

ಐದು ಕೋಟಿ ಸಾಲ ಪಡೆದು ವಂಚನೆ: ನಟ ರಾಜ್ ಪಾಲ್ ತಪ್ಪಿತಸ್ಥ

HSA   ¦    Apr 14, 2018 01:48:47 PM (IST)
ಐದು ಕೋಟಿ ಸಾಲ ಪಡೆದು ವಂಚನೆ: ನಟ ರಾಜ್ ಪಾಲ್ ತಪ್ಪಿತಸ್ಥ

ನವದೆಹಲಿ: ಐದು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನ ಹಾಸ್ಯನಟ ರಾಜ್ ಪಾಲ್ ಯಾದವ್ ಮತ್ತು ಅವರ ಪತ್ನಿ ದೋಷಿಗಳೆಂದು ನ್ಯಾಯಾಲಯವು ಹೇಳಿದ್ದು, ಶಿಕ್ಷೆಯ ಪ್ರಮಾಣ ಎ. 23ರಂದು ಪ್ರಕಟವಾಗಲಿದೆ.

`ಅತಾ ಪತಾ ಲಾಪತಾ' ಚಿತ್ರಕ್ಕಾಗಿ ರಾಜ್ ಪಾಲ್ ಯಾದವ್ ಮತ್ತು ಅವರ ಪತ್ನಿ ಉದ್ಯಮಿ ಎಂ.ಜಿ. ಅಗರ್ವಾಲ್ ಅವರಿಂದ ಐದು ಕೋಟಿ ರೂಪಾಯಿ ಪಡೆದುಕೊಂಡಿದ್ದರು. ಈ ಸಾಲ ಮರುಪಾವತಿ ಮಾಡದೆ ಇದ್ದ ಹಿನ್ನೆಲೆಯಲ್ಲಿ ರಾಜ್ ಪಾಲ್ ಮತ್ತು ಅವರ ಪತ್ನಿ ಮೇಲೆ ಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು.

2013ರಲ್ಲಿ ರಾಜ್ ಪಾಲ್ ಈ ಕೇಸಿನಲ್ಲಿ ಈಗಾಗಲೇ ಹತ್ತು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು.