ಉರಿ ಸಿನಿಮಾದ ನಟ ನವತೇಜ್ ಹಂದಲ್ ನಿಧನ

ಉರಿ ಸಿನಿಮಾದ ನಟ ನವತೇಜ್ ಹಂದಲ್ ನಿಧನ

HSA   ¦    Apr 09, 2019 03:14:56 PM (IST)
ಉರಿ ಸಿನಿಮಾದ ನಟ ನವತೇಜ್ ಹಂದಲ್ ನಿಧನ

ನವದೆಹಲಿ: ಉರಿ ಸಿನಿಮಾದಲ್ಲಿ ಗೃಹ ಸಚಿವರ ಪಾತ್ರ ನಿರ್ವಹಿಸಿದ್ದ ನಟ ನವತೇಜ್ ಹಂದಲ್ ಅವರು ಸೋಮವಾರ ನಿಧನರಾದರು.

ವಿಕಿ ಕೌಶಲ್ ಅವರು ನಾಯಕನಾಗಿ ನಟಿಸಿದ್ದ `ಉರಿ: ದ ಸರ್ಜಿಕಲ್ ಸ್ಟ್ರೈಕ್' ಚಿತ್ರದಲ್ಲಿ ನವತೇಜ್ ಹಂದಲ್ ಅವರು ನಟಿಸಿದ್ದರು. ಹಂದಲ್ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಹಂದಲ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುವರು. ಇವರ ಒಬ್ಬಳು ಮಗಳು ಅವಂತಿಕ ಹಂದಲ್ ಅವರು ಏಕ್ತಾ ಕಪೂರ್ ನಿರ್ದೇಶನದ ಯೇ ಹೇ ಮೊಹಬ್ಬತೇ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

ಸಿನಿ ಆ್ಯಂಡ್ ಟಿವಿ ಆರ್ಟಿಸ್ಟ್ ಅಸೋಸಿಯೇಶನ್ ಹಂದಲ್ ಅವರ ಸಾವಿಗೆ ಶೋಕ ವ್ಯಕ್ತಪಡಿಸಿದೆ.