ಮತದಾನ ಮಾಡಿದ ನಟ ಉಪೇಂದ್ರ ದಂಪತಿ

ಮತದಾನ ಮಾಡಿದ ನಟ ಉಪೇಂದ್ರ ದಂಪತಿ

YK   ¦    May 12, 2018 11:23:35 AM (IST)
ಮತದಾನ ಮಾಡಿದ ನಟ ಉಪೇಂದ್ರ ದಂಪತಿ

ಬೆಂಗಳೂರು: ಇಡೀ ದೇಶದ ಕುತೂಹಲ ಕೆರಳಿಸಿದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಭರ್ಜರಿಯಾಗಿ ಸಾಗುತ್ತಿದ್ದು, ಮತ ಚಲಾವಣೆಯಲ್ಲಿ ಮಹಿಳೆಯರು, ಹಿರಿಯ ನಾಗರೀಕರು ಮುಂದಾಗಿ ಮತದಾನ ಮಾಡುತ್ತಿದ್ದಾರೆ.

ಇನ್ನೂ ಸಿನಿಮಾ ನಟ- ನಟಿಯರು ತಮ್ಮ ಮತಗಟ್ಟೆಗೆ ತೆರಳಿ ಮತದಾನ ಚಲಾಯಿಸುತ್ತಿದ್ದು, ನಟ, ನಿರ್ದೆಶಕ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕ ಮತ ಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

ಇಂದು ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 5.02 ಕೋಟಿ ಮತದಾರರು ಇಂದು ಮತ ಚಲಾಯಿಸಲಿದ್ದಾರೆ.

ಇನ್ನೂ ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಆ ಕ್ಷೇತ್ರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿದ್ದು, 31ಕ್ಕೆ ಮತ ಎಣಿಕೆ ನಡೆಯಲಿದೆ.