ಅರ್ಧದಿಂದಲೇ ಬಿಗ್ ಬಾಸ್ ನಿಂದ ಹೊರ ನಡೆದ ತೇಜಸ್ವಿನಿ..ಕಾರಣ?

ಅರ್ಧದಿಂದಲೇ ಬಿಗ್ ಬಾಸ್ ನಿಂದ ಹೊರ ನಡೆದ ತೇಜಸ್ವಿನಿ..ಕಾರಣ?

Nov 10, 2017 10:32:59 AM (IST)
 ಅರ್ಧದಿಂದಲೇ ಬಿಗ್ ಬಾಸ್ ನಿಂದ ಹೊರ ನಡೆದ ತೇಜಸ್ವಿನಿ..ಕಾರಣ?

ಭಾರೀ ಕುತೂಹಲ ಮೂಡಿಸುತ್ತಿರುವ ಕನ್ನಡ ಬಿಗ್ ಬಾಸ್ ಶೋನಲ್ಲಿ ಶನಿವಾರ ನಾಮಿನೇಟ್ ಆದ ಸದಸ್ಯರ ಪೈಕಿ ಒಬ್ಬರು ಮನೆಯಿಂದ ಹೊರ ನಡೆಯುತ್ತಾರೆ.

ಆದರೆ ಈ ಭಾರಿ ತೇಜಸ್ವಿನಿ ಅವರು ಶನಿವಾರಗಿಂತ ಮುಂಚೆಯೇ ಬಿಗ್ ಬಾಸ್ ಶೋ ನಿಂದ ಹೊರ ಬಂದಿದ್ದಾರೆ. ತಂದೆಯ ಅನಾರೋಗ್ಯ ಕಾರಣದಿಂದ ತೇಜಸ್ವಿನಿ ಮನೆಯಿಂದ ಹೊರ ಬಂದಿದ್ದಾರೆ.

ತೇಜಶ್ವಿನಿ ಅವರ ತಂದೆಯ ಆರೋಗ್ಯ ಸರಿಯಿಲ್ಲ ಎಂದು ಬಿಗ್ ಬಾಸ್ ತಿಳಿಸಿತ್ತು. ತೇಜಸ್ವಿನಿ ತಾಯಿ ಕೂಡ ಮಗಳ ಇರುವಿಕೆಯನ್ನು ಬಯಸಿದ್ದರು. ತೇಜಶ್ವಿನಿ ಒಬ್ಬಳೇ ಮಗಳು. ಆದ್ದರಿಂದ ತಂದೆಯನ್ನು ನೋಡಲು ಅನಿವಾರ್ಯವಾಗಿ ಮನೆಯಿಂದ ಹೋರ ಹೋಗಿದ್ದಾರೆ ತೇಜಶ್ವಿನಿ. ಇದೀಗ ಅರ್ಧದಿಂದಲೇ ಹೊರ ನಡೆದ ತೇಜಸ್ವಿನಿ ಮತ್ತೆ ವಾಪಸ್ ಬರುತ್ತಾರೆಯೇ ಎಂಬುದು ಖಚಿತವಾಗಿಲ್ಲ.

More Images