ನಟ ಅಂಬರೀಷ್ ಅಸ್ವಸ್ಥ: ವಿಕ್ರಂ ಆಸ್ಪತ್ರೆಗೆ ದಾಖಲು

ನಟ ಅಂಬರೀಷ್ ಅಸ್ವಸ್ಥ: ವಿಕ್ರಂ ಆಸ್ಪತ್ರೆಗೆ ದಾಖಲು

HSA   ¦    Sep 08, 2018 05:41:51 PM (IST)
ನಟ ಅಂಬರೀಷ್ ಅಸ್ವಸ್ಥ: ವಿಕ್ರಂ ಆಸ್ಪತ್ರೆಗೆ ದಾಖಲು

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ತುಂಬಾ ಒಡಾಡಿದ್ದ ಅಂಬರೀಷ್ ಅವರು ಕುರ್ಚಿಯಿಂದ ಎದ್ದು ನಡೆಯಲು ಆರಂಭಿಸಿದಾಗ ಎದೆನೋವು, ಕಾಲುನೋವು ಕಾಣಿಸಿಕೊಂಡಿದೆ. ಈ ವೇಳೆ ಅವರನ್ನು ತಕ್ಷಣ ವಿಕ್ರಂ ಆಸ್ಪತ್ರೆಗೆ ಸೇರಿಸಲಾಯಿತು.

ಜಾಸ್ತಿ ಓಡಾಡಿದ್ದರಿಂದ ಸುಸ್ತಾಗಿ, ಸ್ವಲ್ಪ ಎದೆನೋವು ಕಾಣಿಸಿಕೊಂಡಿದೆ ಎಂದು ಅಂಬರೀಷ್ ಜತೆಗಿದ್ದ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.