ಐದುನೂರು ವರ್ಷದ ಪುರಾತನ ಮನೆಯಲ್ಲಿ "ಅನುಕ್ತ" ಶೂಟಿಂಗ್

ಐದುನೂರು ವರ್ಷದ ಪುರಾತನ ಮನೆಯಲ್ಲಿ "ಅನುಕ್ತ" ಶೂಟಿಂಗ್

Rajath Shetty   ¦    Jan 22, 2019 01:19:27 PM (IST)
ಐದುನೂರು ವರ್ಷದ ಪುರಾತನ ಮನೆಯಲ್ಲಿ "ಅನುಕ್ತ" ಶೂಟಿಂಗ್

ಬ್ರಹ್ಮಾವರದಲ್ಲಿನ ಐದುನೂರು ವರ್ಷದ ಪುರಾತನ ಮನೆ ಅಲ್ಲಿ "ಅನುಕ್ತ" ಚಿತ್ರೀಕರಣಗೊಂಡಿದ್ದು, ಕರಾವಳಿಯಲ್ಲಿನ ದೈವಾರಾಧನೆ ಜತೆಗೆ ಕ್ರೈಮ್ ಥ್ರಿಲ್ಲರ್ ಕಥಹಂದರದ ಚಿತ್ರ ಫೆಬ್ರವರಿ ಒಂದರಂದು ತೆರೆ ಕಾಣಲು ಸಿದ್ಧವಾಗಿದೆ. 

ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಕೇಳುಗರ ಕಿವಿ ಇಂಪಾಗಿಸಿದೆ, ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಮಾಡಿರುವ ಚಿತ್ರತಂಡ ಸಾಕಷ್ಟು ಭರವಸೆಯನ್ನು ಮೂಡಿಸಿದೆ. ಇದೊಂದು ಹೊಸಬಗೆಯ ಕಥೆ ಕೆಲವೊಂದು ಘಟನೆಗಳನ್ನು ಆಧರಿಸಿ ಚಿತ್ರವನ್ನು ಮಾಡಲಾಗಿದೆ. ಕಥೆಗೆ ತಕ್ಕಂತೆ ಕರಾವಳಿಯ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಿದ್ದು ಒಂದು ಪುರಾತನ ಮನೆಯಲ್ಲೂ ಕೂಡ ಮಾಡಲಾಗಿದೆ. ರಿಲೀಸ್ ಗೂ ಮುನ್ನವೇ "ಅನುಕ್ತ" ರಿಮೇಕ್ ಮತ್ತು ಟಿವಿ ರೈಟ್ಸ್ ಗೆ ಬಹಳ ಬೇಡಿಕೆ ಬಂದಿದ್ದು ಅಧಿಕ ಬೆಲೆಗೆ ಮಾರಾಟವಾಗುವ ಸಾಧ್ಯತೆಗಳಿವೆ. ಮಲಯಾಲಂ ಗೆ ಈಗಾಗಲೆ ಡಬ್ ಆಗಿದ್ದು ಹೊರದೇಶದಲ್ಲೂ ಕೂಡ ಚಿತ್ರ ತೆರೆ ಕಾಣಲಿದೆ.
ಟ್ರೈಲರ್ ಗೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಇದು ಚಿತ್ರದ ಮೇಲಿರುವ ನಂಬಿಕೆಯನ್ನು ಇನ್ನು ಜಾಸ್ತಿ ಮಾಡಲಾಗಿದೆ ಎಂದು ನಿರ್ದೇಶಕ ಅಶ್ವಥ್ ಸ್ಯಾಮ್ಯುಯಲ್ ತಿಳಿಸಿದ್ದಾರೆ. ಅನುಕ್ತ ಅಂದರೆ ಅನ್ ಟೋಲ್ಡ್ ಅಂತಾರೆ ಚಿತ್ರತಂಡ.

ಚಿತ್ರಕ್ಕೆ ಕಾರ್ತಿಕ್ ಅತ್ತಾವರ ಕಥೆ ಬರೆದಿದ್ದು, ನಾಯಕನಾಗಿಯು ಕೂಡ ಅಭಿನಯಿಸಿದ್ದಾರೆ. ಅವರಿಗೆ ನಾಯಕಿಯಾಗಿ ಸಂಗೀತಾ ಭಟ್ ಅಭಿನಯಿಸಿದ್ದು. ಹಾಡುಗಳನ್ನು ನೋಬಿಲ್ ಪೌಲ್ ಸಂಗೀತ ಸಂಯೋಜನೆ ಮಾಡಿದ್ದು ಚಂದನ್ ಶೆಟ್ಟಿ ಒಂದು ಹಾಡನ್ನು ಕೂಡ ಹಾಡಿದ್ದಾರೆ. ಅನುಪ್ರಭಾಕರ್ ಮುಖ್ಯಪಾತ್ರ ನಿರ್ವಹಿಸಿದ್ದು, ಬಹಳ ದಿನದ ನಂತರ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಬಹುಭಾಷ ನಟ ಕನ್ನಡಿಗ ಸಂಪತ್ ರಾಜ್ ಪಾತ್ರಕ್ಕೆ ಜೀವತುಂಬಿದ್ದಾರೆ. ಚಿತ್ರಕ್ಕೆ ಉದ್ಯಮಿ ಹರೀಶ್ ಬಂಗೇರ ಹಣ ಹೂಡಿದ್ದಾರೆ ಇದು ಅವರ ಮೊದಲ ನಿರ್ಮಾಣದ ಚಿತ್ರವಾಗಿದೆ.

ಕನ್ನಡದಲ್ಲಿ ಸಾಕಷ್ಟು ಹೊಸಬಗೆಯ ಕಥೆಯುಳ್ಳ ಚಿತ್ರಬರುತ್ತಿದ್ದು, ಅದರ ಸಾಲಿಗೆ ಅನುಕ್ತ ಕೂಡ ಸೇರಲಿದೆ. ಇದೇ ಫೆಬ್ರವರಿ ಒಂದರಂದು ಚಿತ್ರ ಕರ್ನಾಟಕ ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.