ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ

ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ

YK   ¦    Dec 03, 2018 01:07:58 PM (IST)
ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ

ನವದೆಹಲಿ: ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ನಟಿ ಸೋನಾಲಿ ಬೇಂದ್ರೆ ಅವರು ಇದೀಗ ಮುಂಬೈಗೆ ಮರಳಿದ್ದಾರೆ. ಪತಿ ಗೋಲ್ಡಿ ಬೆಹಲ್ ಜತೆ ಸೋನಾಲಿ ಬೇಂದ್ರ ಮುಂಬೈಗೆ ವಾಪಾಸ್ಸಾದ ಫೋಟೋವನ್ನು ಸೆರೆ ಹಿಡಿಯಲಾಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಮಾತನಾಡಿದ ಸೋನಾಲಿ ಪತಿ ಗೋಲ್ಡಿ ಬೆಹೆಲ್, ಸದ್ಯಕ್ಕೆ ಸೋನಾಲಿ ಅವರ ಚಿಕಿತ್ಸೆ ಪೂರ್ಣಗೊಂಡಿದ್ದು, ರೆಗ್ಯೂಲರ್ ತಪಾಸಣೆ ಇರುತ್ತದೆ. ಇದೀಗ ಸೋನಾಲಿ ಆರೋಗ್ಯವಾಗಿದ್ದು, ಮರಳಿ ಹಿಂದಿನಂತೆ ಆಗಿದ್ದಾರೆ ಎಂದಿದ್ದಾರೆ.

ಅದಲ್ಲದೆ ಸೋನಾಲಿ ಬೇಂದ್ರೆ ಕೂಡ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿ, ನಾನು ಮತ್ತೇ ನನ್ನ ಹೃದಯದ ಬಳಿ ಬಂದಿದ್ದೇನೆ. ತುಂಬಾ ಖುಷಿಯಾಗಿದ್ದೇನೆ. ಇದನ್ನು ಪದಗಳಲ್ಲಿ ಹೇಳಲು ಸಾದ್ಯವಾಗುತ್ತಿಲ್ಲ ಎಂದು ಬರಹ ಬರೆದು ಪೋಸ್ಟ್ ಮಾಡಿದ್ದಾರೆ.