ಕನಕೋತ್ಸವದಲ್ಲಿ ಮೆರುಗು ತುಂಬಿದ ಸ್ಯಾಂಡಲ್ ವುಡ್ ಸ್ಟಾರ್ ಗಳು

ಕನಕೋತ್ಸವದಲ್ಲಿ ಮೆರುಗು ತುಂಬಿದ ಸ್ಯಾಂಡಲ್ ವುಡ್ ಸ್ಟಾರ್ ಗಳು

YK   ¦    Jan 15, 2018 10:35:27 AM (IST)
ಕನಕೋತ್ಸವದಲ್ಲಿ ಮೆರುಗು ತುಂಬಿದ ಸ್ಯಾಂಡಲ್ ವುಡ್ ಸ್ಟಾರ್ ಗಳು

ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆದ ಅದ್ಧೂರಿ ಕನಕೋತ್ಸವಕ್ಕೆ ರಾತ್ರಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಮೆರುಗು ನೀಡುವ ಮೂಲಕ ಸಮಾರಂಭ ಅದ್ಧೂರಿಯಾಗಿ ಮುಕ್ತಾಯವಾಯಿತು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ರವರ ಮೂಸಿಕಲ್ ನೈಟ್ಸ್ ನಗರದ ಪುರಸಭೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರನ್ನು ಹುಚ್ಚೆಬ್ಬಿಸಿ ಕುಣಿಸಿತು. ಇನ್ನೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹಾಡಿದ ಹುಚ್ಚ ಚಿತ್ರದ ಉಸಿರೇ… ಉಸಿರೇ… ಹಾಡು ಎಲ್ಲರನ್ನು ರಂಜಿಸತು. ಅಲ್ಲದೆ ನಟಿಯಾರಾದ ನಟಿ ಮಾನ್ವಿತಾ, ಶಾನ್ವಿ, ರಂಜಿತಾ ಇನ್ನಷ್ಟು ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.

ಸುದೀಪ್ರನ್ನು ಇದೇ ವೇಳೆ ಸನ್ಮಾನಿಸಿದ ಇಂಧನ ಸಚಿವ ಡಿ.ಕೆ ಶಿವಕುಮಾರ್, ಸುದೀಪ್ ರಾಜ್ಯಕ್ಕೆ ದೊಡ್ಡ ಆಸ್ತಿ. ಅವರ ಕೀರ್ತಿ ಇದೀಗ ವಿಶ್ವದೆತ್ತರಕ್ಕೆ ಪಸರಿಸ್ತಾ ಇರುವುದಕ್ಕೆ ಅಭಿನಂದಿಸಿದ್ರು.

 

More Images