ಕಾದಲ್ ಇದು ಎರಡು ಹೃದಯಗಳ ಕಥೆ !

ಕಾದಲ್ ಇದು ಎರಡು ಹೃದಯಗಳ ಕಥೆ !

LK   ¦    Aug 09, 2017 11:08:28 AM (IST)
ಕಾದಲ್ ಇದು ಎರಡು ಹೃದಯಗಳ ಕಥೆ !

ತಮಿಳಿನಲ್ಲಿ ಈ ಹಿಂದೆ ತೆರೆಕಂಡ ಕಾದಲನ್ ಚಿತ್ರ ಸೂಪರ್ ಹಿಟ್ ಆಗಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಇದೀಗ ಕನ್ನಡದಲ್ಲಿ ಎರಡು ಹೃದಯಗಳ ನಡುವಿನ ಪ್ರೇಮ ಕಥೆಯನ್ನು ಕಾದಲ್ ಎಂಬ ಹೆಸರಿನಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ.ಈಗಾಗಲೇ ಭಾರೀ ನಿರೀಕ್ಷೆಯಲ್ಲಿ ಚಿತ್ರತಂಡವಿದ್ದು, ಶೀಘ್ರವೇ ಚಿತ್ರವನ್ನು ತೆರೆಗೆ ತರಲು ಚಿತ್ರ ತಂಡ ತಯಾರಿ ನಡೆಸುತ್ತಿದೆ. ಈಗಾಗಲೇ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನಡೆದಿದ್ದು, ಹಾಡುಗಳು ಚಿತ್ರಪ್ರೇಮಿಗಳ ಮನಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಈಗಾಗಲೇ ಪ್ರೀತಿ, ಪ್ರೇಮಗಳ ಕುರಿತಂತೆ ಹಲವು ಚಿತ್ರಗಳು ತೆರೆಗೆ ಬಂದಿದ್ದರೂ ಈ ಚಿತ್ರವನ್ನು ವಿಭಿನ್ನವಾಗಿ ತೆರೆಗೆ ತರುವ ಯತ್ನವನ್ನು ನಿರ್ದೇಶಕ ಮುರುಳಿ ಮಾಡಿದ್ದಾರೆ.

ಹಾಗೆ ನೋಡಿದರೆ ಈ ಹಿಂದೆ ತೆರೆಕಂಡ ಮುಮ್ತಾಜ್ ಚಿತ್ರಕ್ಕೂ ಇವರೇ ಆಕ್ಷನ್ ಕಟ್ ಹೇಳಿದ್ದರು. ಇದೀಗ ಈ ಚಿತ್ರಕ್ಕೂ ಇವರೇ ನಿರ್ದೇಶಕರಾಗಿರುವುದರಿಂದ ಭರವಸೆ ಮೂಡಿಸಿದೆ.ಸುಮಾರು 45 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣವನ ಮುಗಿಸಿಯಾಗಿದೆ. ಎಲ್ಲವೂ ಸರಿಹೋದರೆ ಶೀಘ್ರವೇ ಬಿಡುಗಡೆಯಾಗಲಿದೆ.
ಎಸ್. ಸುರೇಶ್ ಅವರು ಅವರು ನಿರ್ಮಾಪಕರಾಗಿದ್ದು ಅವರ ಮಗ ಸಿವಿಲ್ ಇಂಜಿನಿಯರ್ ಆಗಿರುವ ಆಕಾಶ್ ನಾಯಕನಟನಾಗಿ ಅಭಿನಯಿಸುತ್ತಿದ್ದು, ಇವರಿಗೆ ನಾಯಕಿಯಾಗಿ ಮೈಸೂರು ಮೂಲದ ಧರಣಿ ಅವರು ನಟಿಸುತ್ತಿದ್ದಾರೆ.ಇನ್ನು ನಿಮರ್ಮಾಪಕ ಸುರೇಶ್ ಅವರ ಬಗ್ಗೆ ಹೇಳಬೇಕೆಂದರೆ ಎಸ್. ಸುರೇಶ್ ಅವರು ಪುಟ್ಟಣ್ಣ ಕಣಗಾಲ್ ಕಾಲದಲ್ಲಿಯೇ ಬಣ್ಣ ಹಾಕುವ ಬಯಕೆ ಹೊತ್ತವರು. ಆದರೆ ಅವತ್ತು ಅವರಿಗೆ ಅವಕಾಶಗಳು ಸಿಗಲಿಲ್ಲ. ಆದರೆ ಆ ಆಸೆ ಹಾಗೆಯೇ ಉಳಿದಿದ್ದು ಮಗನನ್ನು ನಾಯಕನಾಗಿ ಮಾಡಿಕೊಂಡು ಚಿತ್ರ ನಿರ್ಮಾಣ ಮಾಡುವ ಮೂಲಕ ತಮ್ಮ ಬಯಕೆ ಈಡೇರಿಸಿಕೊಳ್ಳುತ್ತಿದ್ದಾರೆ ನಾಯಕನ ಸಹೋದರ ಪವನ್ ಕೆ.ಬಿ. ರಚನೆ ಮಾಡಿರವ ಮೂರು ಗೀತೆಗಳಿದ್ದು ಮತ್ತು ಪದ್ಮ ಪ್ರಸಾದ್ ಜೈನ್ ಬರೆದಿರುವ ಒಟ್ಟು ನಾಲ್ಕು ಗೀತೆಗಳಿಗೆ ಪ್ರವೀಣ. ಕೆ.ಬಿ. ಸಂಗೀತ ಸಂಯೋಜಿಸಿದ್ದಾರೆ.
ಸಹಾಯಕ ನಿರ್ದೇಶಕನೊಬ್ಬ ಅರಿವಿಲ್ಲದೆ ಕ್ಯಾನ್ಸರ್ ಪೀಡಿತ ಯುವತಿಯನ್ನು ಪ್ರೀತಿಸುತ್ತಾನೆ. ನಂತರ ಆತ ತನ್ನ ಕನಸಿನ ಚಿತ್ರವನ್ನು ನಿರ್ದೇಶನ ಮಾಡುತ್ತಾನೋ? ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಸಫಲನಾಗುತ್ತಾನಾ ಎಂಬುದನ್ನು ಚಿತ್ರದ ಕಥೆಯಾಗಿದೆ. ತಾರಾಗಣದಲ್ಲಿ ಸುಧಾಕರ್, ಮಂಜುನಾಥ್, ಕುಮಾರಿ ಭಾವನ ಅಲ್ಲದೆ ಬಹುತೇಕ ಹೊಸಬರಿಗೆ ಅವಕಾಶ ನೀಡಲಾಗಿದೆ.

More Images