ಅಂಧ ಅಭಿಮಾನಿಯ ಜತೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್‌ ಸ್ಟಾರ್‌

ಅಂಧ ಅಭಿಮಾನಿಯ ಜತೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್‌ ಸ್ಟಾರ್‌

Jan 08, 2017 07:43:43 PM (IST)

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟ ರಾಕಿಂಗ್‌ ಸ್ಟಾರ್‌ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭ ಅಂಧ ಅಭಿಮಾನಿಯನ್ನ ಭೇಟಿ ಮಾಡಿದ ಯಶ್‌-ರಾಧಿಕಾ ಅಭಿಮಾನಿಗಳ ಜತೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ನಿನ್ನೆ ಸಂಜೆಯಿಂದಲೇ ಯಶ್ ಮನೆ ಮುಂದೆ ಅಭಿಮಾನಿಗಳ ದಂಡೇ ಹರಿದುಬಂದಿದ್ದು, ಈ ಬಾರಿ ಪತ್ನಿ ನಟಿ ರಾಧಿಕಾ ಪಂಡಿತ್‌ ಕೂಡ ಅಭಿಮಾನಿಗಳೊಂದಿಗೆ ಯಶ್‌ಗೆ ವಿಷ್ ಮಾಡಿದ್ದು ಈ ಬಾರಿಯ ಹುಟ್ಟುಹಬ್ಬದ ವಿಶೇಷ.

ಯಶ್‌ ತಮ್ಮ ಅಭಿಮಾನಿಗಳಲ್ಲಿ ಪರಿಸರ ಪ್ರೇಮ ಬೆಳೆಸುವ ಉದ್ದೇಶದಿಂದ 'ಯಶೋಮಾರ್ಗ' ವೆಬ್‌ಸೈಟ್ ಲಾಂಚ್‌ ಮಾಡಿ, ಪರಿಸರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಹಾಗೆಯೇ ಶ್ರೀ ಕೃಷ್ಣ ಜ್ಯುವೆಲ್ಲರ್ಸ್ ವತಿಯಿಂದ ಚಿನ್ನದ ಚಾಕು ಮತ್ತು ಬೆಳ್ಳಿಯ ಖಡ್ಗವನ್ನು ನಿರ್ಮಾಪಕ ಜಯಣ್ಣ ಯಶ್ ಗೆ ಉಡುಗೊರೆಯಾಗಿ ನೀಡಿದರು.