ಉಪ್ಪಿ ಜತೆ ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು

ಉಪ್ಪಿ ಜತೆ ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು

LK   ¦    Jul 01, 2019 12:15:10 PM (IST)
ಉಪ್ಪಿ ಜತೆ ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು

ಮೈಸೂರು: ನಗರಕ್ಕೆ ಆಗಮಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಸೆಲ್ಫಿಗೆ ಅಭಿಮಾನಿಗಳು ಮುಗಿ ಬಿದ್ದ ಪ್ರಸಂಗ ಭಾನುವಾರ ನಗರದಲ್ಲಿ ನಡೆದಿದೆ.

ಐ ಲವ್ ಯು ಚಿತ್ರದ ಪ್ರಮೋಷನ್‍ಗೆ ಮೈಸೂರಿಗೆ ಆಗಮಿಸಿದ ಅವರನ್ನ ನೋಡಲು ಅಭಿಮಾನಿಗಳು ಸುತ್ತುವರೆದರು. ಇದರಿಂದ ಉಪೇಂದ್ರ ಅವರು ಪರದಾಡುವಂತಾಯಿತು.

ನಗರದ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದಂತೆಯೇ ನೆರದಿದ್ದ ಅಭಿಮಾನಿಗಳು ಒಮ್ಮೆಲೆ ತಮ್ಮ ನೆಚ್ಚಿನ ನಟನನ್ನು ಕಂಡು ಜೈಕಾರ ಹಾಕಿ, ಅವರ ಜತೆ ಸೆಲ್ಫಿಗೆ ಮುಂದಾದರು. ಈ ವೇಳೆ ಮಾತನಾಡಿದ ನಟ ಉಪೇಂದ್ರ, ರಾಜ್ಯಾದ್ಯಂತ ಐ ಲವ್ ಯು ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಿಗೂ ಚಿತ್ರದ ಪ್ರಮೋಷನ್ ಗೆ ತೆರಳಿದ್ದೇನೆ. ಸದ್ಯ ಚಿತ್ರದ ಪ್ರಮೋಷನ್ ಗೆ ನಾನೊಬ್ಬನೇ ಬಂದಿದ್ದೇನೆ ಮುಂದಿನ ದಿನಗಳಲ್ಲಿ ನಿರ್ದೇಶಕರು ಸೇರಿದಂತೆ ಚಿತ್ರತಂಡದ ಟೀಮ್ ರಾಜ್ಯಾದ್ಯಂತ ಪ್ರವಾಸಗೊಳ್ಳಲಿದೆ ಎಂದರು.

ಪ್ರಜಾಕೀಯದ ಧ್ಯೇಯೋದ್ಯೆಶಗಳನ್ನ ಸಿನಿಮಾ ಮಾಡಲಾರೆ, ಪಕ್ಷದ ಉದ್ದೇಶ ಜನರಿಗೆ ತಲುಪಲು ಸಾಕಷ್ಟು ವರ್ಷಗಳು ಬೇಕು. ದೇಶದಲ್ಲಿ ವ್ಯಕ್ತಿಕೇಂದ್ರಿತ ಅಥವಾ ಪಕ್ಷ ಕೇಂದ್ರಿತ ಚುನಾವಣೆ ನಡೆಯಬಾರದು. ವಿಚಾರಗಳ ಮೇಲೆ ಚುನಾವಣೆ ನಡೆಯುವ ಕಾಲ ಬಂದೇ ಬರಲಿದೆ ಎಂಬುದಾಗಿ ರಾಜಕೀಯದ ಬಗ್ಗೆ ಮಾತನಾಡಿದರು.