ಕೊಮ್ಮೇರಹಳ್ಳಿಯಲ್ಲಿ ಅಡ್ಡದಾರಿ ಸಿನಿಮಾಗೆ ಮುಹೂರ್ತ

ಕೊಮ್ಮೇರಹಳ್ಳಿಯಲ್ಲಿ ಅಡ್ಡದಾರಿ ಸಿನಿಮಾಗೆ ಮುಹೂರ್ತ

LK   ¦    Aug 29, 2019 07:24:23 PM (IST)
ಕೊಮ್ಮೇರಹಳ್ಳಿಯಲ್ಲಿ ಅಡ್ಡದಾರಿ ಸಿನಿಮಾಗೆ ಮುಹೂರ್ತ

ಮಂಡ್ಯ: ತಾಲೂಕಿನ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಕಂಬದ ನರಸಿಂಹಸ್ವಾಮಿ ಸ್ವಾಮಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಜವಾಬ್ದಾರಿ ನಿರ್ಮಿತ ಅಡ್ಡದಾರಿ ಚಲನಚಿತ್ರ ಮುಹೂರ್ತ ಕ್ಯಾಮರ ಪೂಜೆ ಮಾಡುವ ಮುಖಾಂತರ ಕೆಎಂಎಫ್ ನಿರ್ದೇಶಕ ಮಹೇಶ್ ಚಾಲನೆ ನೀಡಿದರು.

ಮಂಡ್ಯ ಜಿಲ್ಲೆ ಕಿರುತೆರೆ ಕಲಾವಿದರ ಸಂಘದ ಅಧ್ಯಕ್ಷ, ವಕೀಲ ಎಂ. ಗುರು ಪ್ರಸಾದ್ ಮಾತನಾಡಿ, ಚಲನಚಿತ್ರ ಶೀರ್ಷಿಕೆ ಅಡ್ಡದಾರಿ ಆಗಿದ್ದು, ಸಮಾಜದಲ್ಲಿ ಅಡ್ಡದಾರಿಗೆ ಹೋಗುವವರನ್ನು ಸರಿದಾರಿಗೆ ತರುವ ಚಿತ್ರಕತೆ ಇದಾಗಿದ್ದು, ಪ್ರತಿಯೊಂದು ಮನೆಯಲ್ಲೂ ಯುವಕ-ಯುವತಿಯರಿಗೆ ಸಮಾಜದ ಜವಾಬ್ದಾರಿಗಳನ್ನು ಹರಿಯುವ ಹಾಗೂ ಭವ್ಯ ಭಾರತ ನಿರ್ಮಾಣ ಮಾಡುವ ಉದ್ದೇಶದ ಚಿತ್ರವಾಗಿದ್ದು, ಪ್ರತಿಯೊಬ್ಬ ಮನುಷ್ಯನು ಚಲನ ಚಿತ್ರದಲ್ಲಿ ಬರುವ ಆಯ್ದ ಭಾಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಈ ಚಲನಚಿತ್ರದಲ್ಲಿ ಮಂಡ್ಯ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ನೀಡಿದ್ದು, ಜಿಲ್ಲೆಯ ಕಲಾವಿದರ ಪ್ರೋತ್ಸಾಹಿಸುವ ಕೆಲಸವನ್ನು ನಿರ್ದೇಶಕ-ನಿರ್ಮಾಪಕ ಆರ್ಯವರ್ಧನ್ ಅವರು ಮಾಡುತ್ತಿದ್ದಾರೆ ಎಂದರು.

ಈ ಚಲನಚಿತ್ರ ಕುಟುಂಬದ ಎಲ್ಲಾ ಸದಸ್ಯರು ನೋಡುವಂತಹ ಚಲನಚಿತ್ರವಾಗಿದೆ. ತೆರೆಯ ಮೇಲೆ ಬರುವ ದೃಶ್ಯ ಮತ್ತು ಸಂಗೀತವನ್ನು ಮೈಗೂಡಿಸಿ ಕೊಂಡು ಪ್ರತಿಯೊಬ್ಬರು ಸಮಾಜಮುಖಿಯಾಗಿ ಬದಲಾವಣೆ ಆಗುವಂತ ಕಥೆಯಾಗಿದ್ದು ಜಿಲ್ಲೆಯ ಜನತೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜಸೇವಕ ವಕೀಲ ಶ್ರೀಕಾಂತ, ಚಲನಚಿತ್ರ ಮುಖ್ಯಸ್ಥರಾದ ಸ್ವಾಮಿ, ಸಮಾಜಸೇವಕಿ ವೈ.ಎಚ್. ರತ್ನಮ್ಮ, ಶೈಲಜಾ ಶಿವಕುಮಾರ, ಅರುಣಾ ಜ್ಯೋತಿ, ಡಾ.ಬಿ.ಯೋಗೇಶ್, ಎಚ್.ಪಿ. ಪ್ರವೀಣ, ವೆಂಕಟೇಶ್, ನಟರಾಜು, ಎಸ್.ಪಿ.ನಾರಾಯಣಸ್ವಾಮಿ ಮಂಜುಳಾ ರಮೇಶ್ ದ್ರಾಕ್ಷಾಯಿಣಿ ಸೇರಿದಂತೆ ಅನೇಕ ನಟ ನಟಿಯರು, ಚಲನಚಿತ್ರ ಛಾಯಾಗ್ರಾಹಕರು, ಸಹಾಯಕರು ಹಾಜರಿದ್ದರು.