ಕುತೂಹಲ ಕೆರಳಿಸಿದ ಸ್ವೀಟಿಯ ‘ಭಾಗಮತಿ’ ಚಿತ್ರದ ಟ್ರೇಲರ್: 26ರಂದು ಚಿತ್ರ ಬಿಡುಗಡೆ

ಕುತೂಹಲ ಕೆರಳಿಸಿದ ಸ್ವೀಟಿಯ ‘ಭಾಗಮತಿ’ ಚಿತ್ರದ ಟ್ರೇಲರ್: 26ರಂದು ಚಿತ್ರ ಬಿಡುಗಡೆ

YK   ¦    Jan 09, 2018 12:09:20 PM (IST)
ಕುತೂಹಲ ಕೆರಳಿಸಿದ ಸ್ವೀಟಿಯ ‘ಭಾಗಮತಿ’ ಚಿತ್ರದ ಟ್ರೇಲರ್: 26ರಂದು ಚಿತ್ರ ಬಿಡುಗಡೆ

ಈಚೆಗೆ ಅನುಷ್ಕಾ ಶೆಟ್ಟಿ ಅಭಿನಯದ ಟಾಲಿವುಡ್ನ ಬಹುನಿರೀಕ್ಷಿತ ಚಿತ್ರ `ಭಾಗಮತಿ’ ಯ ಟೀಸರ್ ರಿಲೀಸ್ ಆಗಿದ್ದು, ಇಂದು ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಜಿ. ಅಶೋಕ್ ನಿರ್ದೇಶನದಲ್ಲಿ ತಯಾರಾದ ಭಾಗಮತಿ ಥ್ರಿಲ್ಲರ್ ಕಮ್ ಮತ್ತು ಹಾರರ್ ಕಥಾ ಹಂದರವನ್ನು ಒಳಗೊಂಡಿದೆ.

ಇದೊಂದು ಮಹಿಳಾ ಪ್ರಧಾನ ಕಥೆಯಾಗಿದ್ದು ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಂಶಿ ಕೃಷ್ಣರೆಡ್ಡಿ ನಿರ್ಮಿಸಿದ್ದಾರೆ.

ಸಿನಿಮಾದ ಮೊದಲಾರ್ಧದಲ್ಲಿ ಅನುಷ್ಕಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾಗೆ ನಾಯಕನಾಗಿ ಉನ್ನಿ ಮುಕುಂದನ್ ಅಭಿನಯಿಸಿದ್ದಾರೆ. ಇನ್ನು ಉಳಿರ್ಧದಲ್ಲಿ ಸಸ್ಪೆನ್ಸ್ ಮತ್ತು ಹಾರರ್ ಇದ್ದು, ಅನುಷ್ಕಾ ಅಭಿನಯದ ಅರುಂಧತಿ ಸಿನಿಮಾದ ಛಾಯೆಯನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಇನ್ನೂ ಸಿನಿಮಾದ ಟ್ರೇಲರ್ ನ್ನು ನೋಡಿದಾಗ ಆರುಂದತಿಯನ್ನು ನೆನಪಿಸುವಂತಿದೆ.

ಇದೀಗ ಚಿತ್ರದ ಟ್ರೇಲರ್ ಕುತೂಹಲವನ್ನು ಮೂಡಿಸಿದ್ದು ಇದೇ 26ರಂದು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

 

More Images