ರಚಿತಾ ರಾಮ್ ಹೇಳ್ತಾರೆ ಜೆಡಿಎಸ್ ಗೆ ವೋಟ್ ಮಾಡ್ಬೇಕಂತೆ!

ರಚಿತಾ ರಾಮ್ ಹೇಳ್ತಾರೆ ಜೆಡಿಎಸ್ ಗೆ ವೋಟ್ ಮಾಡ್ಬೇಕಂತೆ!

SRJ   ¦    Apr 21, 2018 05:33:02 PM (IST)
ರಚಿತಾ ರಾಮ್ ಹೇಳ್ತಾರೆ ಜೆಡಿಎಸ್ ಗೆ ವೋಟ್ ಮಾಡ್ಬೇಕಂತೆ!

ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿನಿಮಾ ತಾರೆಯರು ರಾಜಕೀಯ ಪ್ರಚಾರಕ್ಕೆ ಇಳಿದು ಬಿಡುತ್ತಾರೆ. ಕೆಲವರು ರೋಡ್ ಶೋ ಮಾಡಿ ಪ್ರಚಾರ ಕೈಗೊಂಡರೆ ಇನ್ನು ಕೆಲವರು ಫೇಸ್ ಬುಕ್, ಟ್ವಿಟ್ಟರ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಷ್ಟದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ನಿಲ್ಲುತ್ತಾರೆ.

ಇದೀಗ ನಟಿ ರಚಿತಾ ರಾಮ್ ಅವರು ಜೆಡಿಎಸ್ ಪರವಾಗಿ ಮತ ಯಾಚನೆ ಆರಂಭಿಸಿದ್ದು, ವಿಡಿಯೋ ಮಾಡುವ ಮೂಲಕ ಜೆಡಿಎಸ್ ಪರವಾಗಿ ಮತಯಾಚನೆ ಮಾಡಿದ್ದಾರೆ.

'ಮೇ 12ಕ್ಕೆ ನಮ್ಮ ರಾಜ್ಯದ ಚುನಾವಣೆ ಘೋಷಣೆ ಆಗಿದೆ. ನಮ್ಮ ರಾಜ್ಯದ ಅಭಿವೃದ್ಧಿಗಾಗಿ ಮತ್ತು ರೈತರ ಪರ ಹೋರಾಡುವಂತಹ ಒಬ್ಬ ಒಳ್ಳೆಯ ನಾಯಕನ ಅವಶ್ಯಕತೆ ನಮ್ಮ ರಾಜ್ಯಕ್ಕಿದೆ. ಹಾಗಾಗಿ ಎಲ್ಲರೂ ಹೋಗಿ ನಿಮ್ಮ ಮತವನ್ನು ಜವಾಬ್ದಾರಿಯಿಂದ ಚಲಾಯಿಸಿ'.

'ಇವರಿಗೆ ಸಿಕ್ಕ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಬಹಳಷ್ಟು ಯಶಸ್ವಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ರೈತರ ಪರ ಬೆಂಬಲಕ್ಕೆ ನಿಂತು ಹಾಗೆ ಅವರ ಪರವಾಗಿ ಒಳ್ಳೆ ಯೋಜನೆಗಳನ್ನು ಅಳವಡಿಸಿ ಯಶಸ್ವಿಯಾದ ಏಕೈಕ ನಾಯಕರು ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಜೆ.ಡಿ.ಎಸ್ ರಾಜ್ಯಾಧ್ಯಕ್ಷರಾದ ಶ್ರೀಯುತ ಹೆಚ್.ಡಿ.ಕುಮಾರಣ್ಣನವರು'. 'ರಾಜ್ಯದ ಅಭಿವೃದ್ಧಿಗಾಗಿ ಮತ್ತು ನಮ್ಮ ಕರ್ನಾಟಕದ ಭವಿಷ್ಯಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಮತವನ್ನು ಹಾಕಿ ಅಧಿಕಾರಕ್ಕೆ ತನ್ನಿ'. ಎಂದು ಡಿಂಪಲ್ ಕ್ವೀನ್ ರಚ್ಚು ಕಳಕಳಿಯಿಂದ ಕೇಳಿಕೊಂಡಿದ್ದಾರೆ.

ನಟಿ ರಚಿತಾ ರಾಮ್ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷದ ಪರವಾಗಿ ಮಾತನಾಡಿದ್ದು ಅವರ ಅಭಿಮಾನಿಗಳಲ್ಲಿ ಆಶ್ಚರ್ಯ ತರಿಸಿದ್ದಂತು ಸುಳ್ಳಲ್ಲ.