'ದಿ ಆಕ್ಸಿಡೆಂಟರ್ ಪ್ರೈಮ್ ಮಿನಿಸ್ಟರ್' ಚಿತ್ರ ಪ್ರದರ್ಶನಕ್ಕೆ ವಿರೋಧ

'ದಿ ಆಕ್ಸಿಡೆಂಟರ್ ಪ್ರೈಮ್ ಮಿನಿಸ್ಟರ್' ಚಿತ್ರ ಪ್ರದರ್ಶನಕ್ಕೆ ವಿರೋಧ

YK   ¦    Jan 12, 2019 11:53:25 AM (IST)
'ದಿ ಆಕ್ಸಿಡೆಂಟರ್ ಪ್ರೈಮ್ ಮಿನಿಸ್ಟರ್' ಚಿತ್ರ ಪ್ರದರ್ಶನಕ್ಕೆ ವಿರೋಧ

ಕೊಲ್ಕತ್ತಾ: ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ ಪ್ರದರ್ಶನವನ್ನು ವಿರೋಧಿಸಿ ವೆಸ್ಟ್ ಬೆಂಗಾಲ್ ಕಾಂಗ್ರೆಸ್ ಕಾರ್ಯಕರ್ತರು ಚಿತ್ರಮಂದಿರಕ್ಕೆ ತೆರಳಿ  ಅಡಚಣೆ ಮಾಡಿದ ಘಟನೆ ನಡೆದಿದೆ.

ಬೆಳಿಗ್ಗೆ 8 ಗಂಟೆಗೆ ಚಿತ್ರ ಪದರ್ಶಗೊಳ್ಳುತ್ತಿದ್ದ ಹಾಗೇ ಅಲ್ಲಿಗೆ ಬಂದ ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷದ ಭಾವುಟವನ್ನು ಹಿಡಿದು ಒಳಗೆ ನುಗ್ಗಿ ಜೈಕಾರ ಕೂಗಿದ್ದಾರೆ.

ಚಿತ್ರ ವೀಕ್ಷಿಸಲು ಬಂದವರಿಗೆ ಬೆದರಿಕೆಯೊಡ್ಡಿ ಅಲ್ಲಿಂದ್ದ ತೆರಳುವಂತೆ ಕೈ ಕಾರ್ಯಕರ್ತರು ಹೇಳಿದ್ದಾನೆ. ಈ ಚಿತ್ರದಲ್ಲಿ ಕಾಂಗ್ರೆಸ್ ನ ನಾಯಕಿ ನೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅವಮಾಣ ಮಾಡಿ ಚಿತ್ರೀಕರಿಸಲಾಗಿದೆ.  ಯಾವುದೇ ಕಾರಣಕ್ಕೂ ಚಿತ್ರಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ವಾಗ್ವಾಧ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಧ್ಯಪ್ರವೇಶಿಸಿದ ಚಿತ್ರಮಂದಿರ ಮುಖ್ಯಸ್ಥರು ಚಿತ್ರ ಪ್ರದರ್ಶನ ರದ್ದು ಮಾಡಲಾಗುವುದಿಲ್ಲ. ನಂತರ ಪೊಲೀಸರ ಬಿಗಿ ಭದ್ರತೆಯೊಂದಿಗೆ ಚಿತ್ರಪ್ರದರ್ಶನವಾಗಗಿದ್ದು, ಯಾವುದೇ ಅಹಿತಕರ ಘಟನೆಯಿಲ್ಲದೆ ಪ್ರದರ್ಶನಗೊಂಡಿದೆ.