ನಟ ರಜನಿಕಾಂತ್ ಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ' ಪ್ರಶಸ್ತಿ

ನಟ ರಜನಿಕಾಂತ್ ಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ' ಪ್ರಶಸ್ತಿ

YK   ¦    Nov 03, 2019 09:36:34 AM (IST)
ನಟ ರಜನಿಕಾಂತ್ ಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ' ಪ್ರಶಸ್ತಿ

ನವದೆಹಲಿ: ಇದೇ ೨೦ರಿಂದ ೨೮ರ ವರೆಗೆ ಗೋವಾದಲ್ಲಿ ನಡೆಯುವ ಭಾರತದ 50ನೇ ಅಂತರರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್ ಅವರಿಗೆ ‘ಐಕಾನ್ ಆಫ್‌ ಗೋಲ್ಡನ್‌ ಜುಬಿಲಿ’ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಸಮ್ಮೇಳನದಲ್ಲಿ ವಿವಿಧ ದೇಶಗಳ ೨೫೦ಕ್ಕೂ ಅಧಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಸಂಬಂಧ ಟ್ವೀಟ್ ಮಾಡಿರುವ ನಟ ರಜನಿಕಾಂತ್ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸುವ ನಿರ್ಧಾರಕ್ಕೆ ಕೃತಜ್ಞತೆ. ಈ ಪ್ರತಿಷ್ಠಿತ ಗೌರವಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ