ಮೊದಲ ಹಾಡಿನ ಯಶಸ್ವಿನ ಬಳಿಕ ಎರಡನೇ ಹಾಡು ಬಿಡುಗಡೆ ಮಾಡಿದ ಯಜಮಾನ ಚಿತ್ರತಂಡ

ಮೊದಲ ಹಾಡಿನ ಯಶಸ್ವಿನ ಬಳಿಕ ಎರಡನೇ ಹಾಡು ಬಿಡುಗಡೆ ಮಾಡಿದ ಯಜಮಾನ ಚಿತ್ರತಂಡ

YK   ¦    Jan 19, 2019 04:20:37 PM (IST)
ಮೊದಲ ಹಾಡಿನ ಯಶಸ್ವಿನ ಬಳಿಕ ಎರಡನೇ ಹಾಡು ಬಿಡುಗಡೆ ಮಾಡಿದ ಯಜಮಾನ ಚಿತ್ರತಂಡ

ಬೆಂಗಳೂರು: ಯಜಮಾನ ಚಿತ್ರದ ಎರಡನೇ ಮೆಲೋಡಿ ಹಾಡನ್ನು ಶನಿವಾರ ಚಿತ್ರತಂಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ  ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಬಹುನಿರೀಕ್ಷಿತ ಚಿತ್ರವಾಗಿದ್ದು, ಸಂಕ್ರಾಂತಿಯಂದು ಚಿತ್ರತಂಡ ಶಿವನಂದಿ ಹಾಡನ್ನು ಬಿಡಗಡೆ ಮಾಡಿತ್ತು. ಈ ಹಾಡು ಮೂರು ದಿನಗಳ ಕಾಲ ಯುಟ್ಯೂಬ್ ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಮೊದಲನೇ ಹಾಡಿನ ಯಶಸ್ವಿನ ಬಳಿಕ ಇದೀಗ ಎರಡನೇ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿದ ದರ್ಶನ್, ' ಶಿವನಮದಿ ಹಾಡಿಗೆ ನೀವು ತೋರಿಸಿರುವ ಪ್ರೀತಿಗೆ ನಾ ಅಭಾರಿಯಾಗಿದ್ದೇನೆ. ಈಗ ಯಜಮಾನ ಚಿತ್ರದ 2ನೇ ಹಾಡು- ಒಂದು ಮುಂಜಾನೆ ಮೆಲೋಡಿ ನಿಮಗಾಗಿ. ಕೇಳಿ ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ ಎಂದು ಬರೆದುಕೊಂಡಿದ್ದಾರೆ.