ಚಿತ್ರೀಕರಣ ವೇಳೆ ಉರಿ ಸಿನಿಮಾ ನಟನಿಗೆ ಗಂಭೀರ ಗಾಯ

ಚಿತ್ರೀಕರಣ ವೇಳೆ ಉರಿ ಸಿನಿಮಾ ನಟನಿಗೆ ಗಂಭೀರ ಗಾಯ

HSA   ¦    Apr 20, 2019 04:12:35 PM (IST)
ಚಿತ್ರೀಕರಣ ವೇಳೆ ಉರಿ ಸಿನಿಮಾ ನಟನಿಗೆ ಗಂಭೀರ ಗಾಯ

ನವದೆಹಲಿ: `ಉರಿ: ಸರ್ಜಿಕಲ್ ಸ್ಟ್ರೈಕ್' ಸಿನಿಮಾದಲ್ಲಿ ನಟಿಸಿದ್ದ ವಿಕಿ ಕೌಶಲ್ ಅವರು ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಭಾನು ಪ್ರತಾಪ್ ಸಿಂಗ್ ಅವರ ಹಾರರ್ ಸಿನಿಮಾ ಗುಜರಾತ್ ನ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಸ್ಟಂಟ್ ಮಾಡುವ ವೇಳೆ ವಿಕಿ ಕೌಶಲ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆನ್ನೆಯ ಮೂಳೆ ಮುರಿತವಾಗಿದ್ದು, ಸುಮಾರು 13 ಹೊಲಿಗೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಕಿ ಕೌಶಲ್ ಅವರ ಮೇಲೆ ಬಾಗಿಲು ಬಿದ್ದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.