ರಷ್ಯಾದ ಗೆಳೆಯನ ಜತೆ ನಟಿ ಶ್ರೇಯಾ ಸರಣ್ ಗುಟ್ಟಾಗಿ ಮದುವೆ!

ರಷ್ಯಾದ ಗೆಳೆಯನ ಜತೆ ನಟಿ ಶ್ರೇಯಾ ಸರಣ್ ಗುಟ್ಟಾಗಿ ಮದುವೆ!

HSA   ¦    Mar 17, 2018 03:28:13 PM (IST)
ರಷ್ಯಾದ ಗೆಳೆಯನ ಜತೆ ನಟಿ ಶ್ರೇಯಾ ಸರಣ್ ಗುಟ್ಟಾಗಿ ಮದುವೆ!

ಮುಂಬಯಿ: ದಕ್ಷಿಣ ಭಾರತೀಯ ಚಿತ್ರಗಳ ಸಹಿತ ಬಾಲಿವುಡ್ ನಲ್ಲೂ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಶ್ರೇಯಾ  ಸರಣ್, ರಷ್ಯಾದ ಗೆಳೆಯನನ್ನು ಗುಟ್ಟಾಗಿ ಮದುವೆಯಾಗಿದ್ದಾರೆಂಬ ವರದಿಗಳು ಬಂದಿದೆ.

ಶ್ರೇಯಾ  ಸರಣ್ ತನ್ನ ಕುಟುಂಬಿಕರು ಹಾಗೂ ಆಪ್ತ ವರ್ಗದವರ ಮುಂದೆ ಹಿಂದೂ ಸಂಪ್ರದಾಯದಂತೆ ರಷ್ಯಾದ ಟೆನಿಸ್ ಆಟಗಾರ ಆ್ಯಂಡ್ರಿ ಕೊಸ್ಟೆಯೇವ್ ರನ್ನು ಮಾ.12ರಂದು ವಿವಾಹವಾಗಿದ್ದಾರೆ ಎಂದು ವರದಿಗಳು ಹೇಳಿವೆ.

ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಮನೋಜ್ ಬಾಜಪೇಯಿ, ನಟಿ ಶಬಾನ ಮೊದಲಾದವರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.