ಪರಿಮಳ ಲಾಡ್ಜ್ ಟೀಸರ್ ಬಿಡುಗಡೆ ಮಾಡಿದ ಡಿಬಾಸ್

ಪರಿಮಳ ಲಾಡ್ಜ್ ಟೀಸರ್ ಬಿಡುಗಡೆ ಮಾಡಿದ ಡಿಬಾಸ್

YK   ¦    Aug 29, 2019 12:26:59 PM (IST)
ಪರಿಮಳ ಲಾಡ್ಜ್ ಟೀಸರ್ ಬಿಡುಗಡೆ ಮಾಡಿದ ಡಿಬಾಸ್

ಬೆಂಗಳೂರು: ನೀರ್ ದೋಸೆ ಚಿತ್ರ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಪರಿಮಳ ಲಾಡ್ಜ್ ಚಿತ್ರದ ಟೀಸರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿದ್ದಾರೆ. ನಂತರ ಮಾತನಾಡಿದ ಅವರು, ಟೀಸರ್ ಚೆನ್ನಾಗಿ ಮೂಡಿ ಬಂದಿದ್ದು, ಯಶಸ್ವಿಯಾಗಿ ಚಿತ್ರ ಪ್ರದರ್ಶನ ಕಾಣಲಿ ಎಂದು ಶುಭಹಾರೈಸಿದರು.

ಈ ಚಿತ್ರದಲ್ಲಿ ನಾಯಕರಾಗಿ ನೀನಾಸಂ ಸತೀಸ್ ಹಾಗೂ ಲೂಸ್ ಮಾದ ಯೋಗಿ ಅವರು ಒಟ್ಟಾಗಿ ನಟಿಸಿದ್ದಾರೆ. ಹಿರಿಯ ಕಲಾವಿದ ದತ್ತಣ್ಣ ಹಾಗೂ ನಟಿ ಸುಮನ್ ರಂಗಾನಾಥ್ ಅವರು ತಾರಾ ಬಳಗದಲ್ಲಿದ್ದಾರೆ.ಬ್ಯೂಟಿಫುಲ್ ಮನಸುಗಳು ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರಸನ್ನ ಪರಿಮಳಾ ಅವರು ಈ ಚಿತ್ರಕ್ಕೆ ಬಮಡವಾಳ ಹೂಡಿದ್ದಾರೆ.