ಅರ್ಜುನ್ ಸರ್ಜಾ ಕನ್ನಡದ ಹೆಮ್ಮೆ, ಆದರೆ ನಾನು ಶ್ರುತಿ ಹರಿಹರನ್ ಪರ: ಪ್ರಕಾಶ್ ರಾಜ್

ಅರ್ಜುನ್ ಸರ್ಜಾ ಕನ್ನಡದ ಹೆಮ್ಮೆ, ಆದರೆ ನಾನು ಶ್ರುತಿ ಹರಿಹರನ್ ಪರ: ಪ್ರಕಾಶ್ ರಾಜ್

YK   ¦    Oct 21, 2018 11:27:06 AM (IST)
ಅರ್ಜುನ್ ಸರ್ಜಾ ಕನ್ನಡದ ಹೆಮ್ಮೆ, ಆದರೆ ನಾನು ಶ್ರುತಿ ಹರಿಹರನ್ ಪರ: ಪ್ರಕಾಶ್ ರಾಜ್

ಬೆಂಗಳೂರು: ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಕಿಗ ದೌರ್ಜನ್ಯ ಆರೋಪ ಎಸಗಿದ ನಟಿ ಶ್ರುತಿ ಹರಿಹರನ್ ಪರ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೆಂಬಲ ನೀಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್ ಅವರು, 'ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ..ದಿಟ್ಟ ಹೆಣ್ಣು. ಅರ್ಜುನ್ ಸರ್ಜಾ ಕೂಡ ಕನ್ನಡದ ಹೆಮ್ಮೆ. ನಾನು ಶ್ರುತಿ ಹರಿಹರನ್ ರವರ ಪರವಾಗಿ.. ಈ ಮೂಲಕ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ ಎಂದು ತಿಳಿಸಿದ್ದಾರೆ.

ಅರ್ಜುನ್ ಸರ್ಜಾ ಹಿರಿಯ ನಟರೂ ಎಂಬುದನ್ನೂ ಮರೆಯದಿರೋಣ. ಆದರೆ ಶ್ರುತಿಯವರ ಆರೋಪದ ಹಿನ್ನೆಲೆಯಲ್ಲಿ.. ಆ ಹೆಣ್ಣು ಅನುಭವಿಸಿದ ಅಸಹಾಯಕತೆ...ಅವಮಾನ...ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಅರ್ಜುನ್ ಅವರು ಈ ಆರೋಪವನ್ನು ಅಲ್ಲಗಳೆದರೂ.. ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ ಎಂದು ಪ್ರಕಾಶ್‌ ರೈ ಹೇಳಿದರು.

ಅರಿತೋ ಅರಿಯದೆಯೋ ನಾವು ಗಂಡಸರು ಹುಟ್ಟಿನಿಂದಲೇ ಹೆಣ್ಣೀನ ಬೇಕು ಬೇಡಗಳ ಬಗ್ಗೆ ಸೂಕ್ಷಮತೆಯನ್ನು ಕಳೆದುಕೊಂಡಿರುವುದು ನಿಜ. ಹೆಣ್ಣುಮಕ್ಕಳೂ ತಮ್ಮ ಹಕ್ಕನ್ನು ಅರಿಯದೆ ಇರುವುದೂ ಅಷ್ಟೇ ನಿಜ ಎಂದರು.