ಬಹುನಿರೀಕ್ಷಿತ ಕೊಂಕಣಿ ಚಿತ್ರ ಜಾಂವಯ್ ನಂ.1 ಬಿಡುಗಡೆ

ಬಹುನಿರೀಕ್ಷಿತ ಕೊಂಕಣಿ ಚಿತ್ರ ಜಾಂವಯ್ ನಂ.1 ಬಿಡುಗಡೆ

HSA   ¦    Apr 13, 2018 04:02:20 PM (IST)
ಬಹುನಿರೀಕ್ಷಿತ ಕೊಂಕಣಿ ಚಿತ್ರ ಜಾಂವಯ್ ನಂ.1 ಬಿಡುಗಡೆ

ಮಂಗಳೂರು: ಬಹುನಿರೀಕ್ಷಿತ ಕೊಂಕಣಿ ಚಿತ್ರ ಜಾಂವಯ್ ನಂ.1 ಚಿತ್ರವು ಶುಕ್ರವಾರ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರಿದ್ದ ಭಾರತ್ ಬಿಗ್ ಸಿನಿಮಾದಲ್ಲಿ ಬಿಡುಗಡೆಗೊಂಡಿತು.

ಜಾಂವಯ್ ನಂ.1 ಚಿತ್ರವು ಸಂಗಾತಿ ಕ್ರಿಯೇಷನ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡಿದೆ. ವಾಲ್ಟರ್ ಡಿ’ಸೋಜಾ, ಸಿರಿಲ್ ಕ್ಯಾಸ್ಟಲಿನೊ ಮತ್ತು ಲಿಯೋ ಫೆರ್ನಾಂಡಿಸ್ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರವನ್ನು ಹ್ಯಾರಿ ಫರ್ನಾಂಡಿಸ್ ಬಾರ್ಕೂರ್ ಅವರು ನಿರ್ದೇಶಿಸಿದ್ದಾರೆ.

ಚಿತ್ರದ ಪ್ರಿಮಿಯರ್ ಷೋವನ್ನು ಮಂಗಳೂರಿನ ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿ’ಸೋಜಾ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು-ಕೊಂಕಣಿ ಸಿನಿಮಾ ನಿರ್ದೇಶಕ ರಿಚರ್ಡ್ ಕ್ಯಾಸ್ಟೆಲಿನೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ, ಮಾಂಡ್ ಸೋಭಾನ್ ನ ಅಧ್ಯಕ್ಷ ಲೂಯಿಸ್ ಜೆ ಪಿಂಟೋ, ಗುರ್ಕಾರ್ ಎರಿಕ್ ಒಝರಿಯೋ, ಬಾಲಿವುಡ್ ನಟಿ ಮತ್ತು ಚಿತ್ರದ ನಾಯಕಿ ವರ್ಷಾ ಉಸ್ಗಾಂಕರ್, ಅಪ್ಪೆ ಟೀಚರ್ ತುಳು ಸಿನಿಮಾದ ನಿರ್ದೇಶಕ ಕಿಶೋರ್ ಮೂಡುಬಿದ್ರೆ, ರಚನಾ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ತುಳು ಕೊಂಕಣಿ ನಟ ದೀಪಕ್ ಪಾಲಡ್ಕ ಮತ್ತು ಇತರರು ಉಪಸ್ಥಿತರಿದ್ದರು.