ನಾದಬ್ರಹ್ಮನ ಕೈಚಳಕ ಇರೋ ಕದ್ದುಮುಚ್ಚಿ ಪ್ರೇಮಕಥೆ

ನಾದಬ್ರಹ್ಮನ ಕೈಚಳಕ ಇರೋ ಕದ್ದುಮುಚ್ಚಿ ಪ್ರೇಮಕಥೆ

Feb 20, 2019 03:39:13 PM (IST)
ನಾದಬ್ರಹ್ಮನ ಕೈಚಳಕ ಇರೋ ಕದ್ದುಮುಚ್ಚಿ ಪ್ರೇಮಕಥೆ

ಕದ್ದುಮುಚ್ಚಿ ಚಿತ್ರ ಪ್ರೇಕ್ಷಕರ ಗಮನ ಸೆಳೆದಿರೋದಕ್ಕೆ ನಾನಾ ಕಾರಣಗಳಿವೆ. ಆದರೆ ಅದಕ್ಕೆ ಪ್ರಧಾನ ಕಾರಣ ಬಹು ಕಾಲದ ನಂತರ ಸಂಗೀತ ಮಾಂತ್ರಿಕ, ನಾದಬ್ರಹ್ಮ ಸಂಗೀತ ನಿರ್ದೇಶಕರಾಗಿ ಮರಳಿರೋದು.

ಹಾಡುಗಳೆಲ್ಲವೂ ಈಗಾಗಲೇ ಹಿಟ್ ಆಗಿವೆ. ವಿಶೇಷ ಅಂದ್ರೆ ಈ ಚಿತ್ರದ ಕಥೆ ಕೇಳಿ ಖುಷಿಯಾಗಿರೋ ಹಂಸಲೇಖ ಅವ್ರೇ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ಇದರೊಂದಿಗೆ ಕದ್ದುಮುಚ್ಚಿ ದೃಶ್ಯಗಳು ಮತ್ತಷ್ಟು ಕಳೆಕಟ್ಟಿಕೊಂಡಿದೆಯಂತೆ. ಖುದ್ದು ಹಂಸಲೇಖಾ ಅವರೇ ಖುಷಿಗೊಂಡಿದ್ದಾರನ್ನೋದೇ ಈ ಸಿನಿಮಾದ ಕಥೆಯ ಅಂದಕ್ಕೆ ಸಾಕ್ಷಿಯಂತಿದೆ. ಈ ಚಿತ್ರದಲ್ಲಿ ಹಿರಿಯ ನಟ ದೊಡ್ಡಣ್ಣ ತುಂಬಿದ ಕುಟುಂಬದ ತಾತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈವರೆಗೂ ಅದೆಷ್ಟೋ ಹಿಟ್ ಚಿತ್ರಗಳಲ್ಲಿ ನಟಿಸಿರೋ ದೊಡ್ಡಣ್ಣನಿಗೂ ಈ ಕಥೆ ಕಾಡಿದೆಯಂತೆ. ಈ ಕಾಲಮಾನಕ್ಕೆ ಹೊಸತಾಗಿರೋ ಈ ಚಿತ್ರ ಖಂಡಿತಾ ಗೆಲ್ಲುತ್ತದೆ ಅನ್ನೋ ಭವಿಷ್ಯವನ್ನೂ ದೊಡ್ಡಣ್ಣ ಹೇಳಿದ್ದಾರೆ!

ಮಂಜುನಾಥ್ ನಿರ್ಮಾಣ ಮಾಡಿರೋ ಈ ಸಿನಿಮಾದಲ್ಲಿ ಕೇವಲ ಪ್ರೀತಿ, ಫ್ಯಾಮಿಲಿ ಮಾತ್ರವೇ ಇದೆ ಅಂದುಕೊಳ್ಳುವಂತಿಲ್ಲ. ಮೈ ನವಿರೇಳಿಸೋ ಸಾಹಸ, ಭರಪೂರ ನಗು ಉಕ್ಕಿಸುವಂಥಾ ಕಾಮಿಡಿ ಸೇರಿದಂತೆ ಎಲ್ಲವೂ ಇದೆಯಂತೆ. ವಿಜಯ್ ಸೂರ್ಯ ಮತ್ತು ಮೇಘಶ್ರೀ ಕ್ಯೂಟ್ ಕಪಲ್ ಆಗಿ ಕಾಣಿಸಿಕೊಂಡಿದ್ದಾರೆ.