ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ: ಚುನವಣಾ ಸಿದ್ಧತೆಯ ಸುಳಿವು ಕೊಟ್ಟ ಸುಮಲತಾ

ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ: ಚುನವಣಾ ಸಿದ್ಧತೆಯ ಸುಳಿವು ಕೊಟ್ಟ ಸುಮಲತಾ

YK   ¦    Mar 12, 2019 04:25:54 PM (IST)
ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ: ಚುನವಣಾ ಸಿದ್ಧತೆಯ ಸುಳಿವು ಕೊಟ್ಟ ಸುಮಲತಾ

ಬೆಂಗಳೂರು: 'ನಮಸ್ಕಾರ, ನಾನು ನಿಮ್ಮ ಸುಮಲತಾ ಅಂಬರೀಷ್. ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ನಲ್ಲಿ ನಾನು ನಿಮ್ಮ ಸಂಪರ್ಕದಲ್ಲಿರುತ್ತೇನೆ.

ಇದು ನನ್ನ ಅಧಿಕೃತ ಪೇಜ್ ಆಗಿರುತ್ತದೆ. ಧನ್ಯವಾದಗಳು ಎಂಬ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಸುಮಲತಾ ಅಂಬರೀಷ್ ಚುನಾವಣಾ ಸಿದ್ಧತೆ ಶುರು ಮಾಡಿದ್ದಾರೆ ಎಂಬ ಸುಳಿವನ್ನು ನೀಡುತ್ತಿದ್ದಾರೆ.

ಮಾರ್ಚ್ 9ರಂದು ಸುಮಲತಾ ಅಂಬರೀಶ್ ಎನ್ನುವ ಫೇಸ್ ಬುಕ್ ಖಾತೆಯನ್ನು ತೆರೆದಿದ್ದರು. ಇದರಲ್ಲಿ ಜನರಿಗೆ ನಮಸ್ಕಾರಿಸುವ ಫೋಟೋವನ್ನು ಹಾಕಿದ್ದರು.

ಇದೀಗ ವಿಡಿಯೋದ ಮುಖಾಂತರ ಜನರ ಜತೆ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂಬ ಭರವಸೆಯೊಂದಿಗೆ ರಾಜಕೀಯ ಪ್ರವೇಶಿಸುವುದರ ಬಗ್ಗೆ ಖಚಿತ ಪಡಿಸುತ್ತಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲರಾ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾ.18ರಂದು ಸ್ಪಷ್ಟ ತೀರ್ಮಾನವನ್ನು ತಿಳಿಸುತ್ತೇನೆ ಎಂದು ಹೇಳಿದ್ದರು.