ಕರಾವಳಿಯಲ್ಲಿ ಕಾಣಿಸಿಕೊಂಡ ಐಶ್ವರ್ಯ ರೈ

ಕರಾವಳಿಯಲ್ಲಿ ಕಾಣಿಸಿಕೊಂಡ ಐಶ್ವರ್ಯ ರೈ

YK   ¦    Dec 03, 2017 12:09:11 PM (IST)
ಕರಾವಳಿಯಲ್ಲಿ ಕಾಣಿಸಿಕೊಂಡ ಐಶ್ವರ್ಯ ರೈ

ಮಂಗಳೂರು: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಅವರು ತಮ್ಮ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.

ಇಲ್ಲಿನ ಕೊಡಿಯಾಲ್ ಬೈಲಿನ ಟಿಎಂಎ ಪೈ ಹಾಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಗಳು ಆರಾಧ್ಯ, ತಾಯಿ ಬೃಂದಾ ರೈ ಜೊತೆ ಭಾಗವಹಿಸಿದ್ದರು. ನಟಿ ಐಶ್ವರ್ಯಾ ರೈ ಅವರ ತಾಯಿ ಬೃಂದಾ ರೈ ಅವರ ಸೋದರನ ಮಗಳ ಮದುವೆ ಸಮಾರಂಭವಾಗಿತ್ತು.

ಈ ವೇಳೆ ನಟಿ ಐಶ್ವರ್ಯ ತುಳುನಾಡಿನ ಸಂಪ್ರದಾಯದಂತೆ ಹಿರಿಯರಿಂದ ಆಶೀರ್ವಾದ ಪಡೆದರು. ನಟಿ ಐಶ್ವರ್ಯ ರೈ ಕೆಂಪು ಬಣ್ಣದ ಸೀರೆಯಲ್ಲಿ, ಮಗಳು ಆರಾಧ್ಯ ಕೂಡ ಅದೇ ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದಳು.