ಸುತ್ತೂರು ಜಾತ್ರೆಯಲ್ಲಿ ಹೆಬ್ಬಟ್ ರಾಮಕ್ಕ ಆಡಿಯೋ ಸಿಡಿ ಬಿಡುಗಡೆಗೊಳಿಸಿದ ಸಿಎಂ

ಸುತ್ತೂರು ಜಾತ್ರೆಯಲ್ಲಿ ಹೆಬ್ಬಟ್ ರಾಮಕ್ಕ ಆಡಿಯೋ ಸಿಡಿ ಬಿಡುಗಡೆಗೊಳಿಸಿದ ಸಿಎಂ

MY   ¦    Jan 18, 2018 07:17:33 PM (IST)
ಸುತ್ತೂರು ಜಾತ್ರೆಯಲ್ಲಿ ಹೆಬ್ಬಟ್ ರಾಮಕ್ಕ ಆಡಿಯೋ ಸಿಡಿ ಬಿಡುಗಡೆಗೊಳಿಸಿದ ಸಿಎಂ

ಮೈಸೂರು: ಸುತ್ತೂರು ಜಾತ್ರೆಯ ಸಮಾರೋಪ ಸಮಾರಂಭದ ವೇದಿಕೆಯಲ್ಲೇ ಹೆಬ್ಬಟ್ ರಾಮಕ್ಕ ಚಿತ್ರ ಆಡಿಯೋ ಸಿಡಿಯನ್ನು ಸಿಎಂ ಸಿದ್ದರಾಮಯ್ಯ ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಇಂದು ಸುತ್ತೂರು ಜಾತ್ರೆಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಚಿತ್ರ ನಟಿ ತಾರಾ ಅಭಿನಯಿಸಿರುವ ಮಹಿಳಾ ಪ್ರಧಾನ ಚಿತ್ರವಾದ ಹೆಬ್ಬಟ್ ರಾಮಕ್ಕ ಚಿತ್ರದ ಆಡಿಯೋ ಸಿಡಿಯನ್ನು ಸಿಎಂ ಸಿದ್ದರಾಮಯ್ಯ, ಸುತ್ತೂರು ಶ್ರೀಗಳು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಟಿ ತಾರಾ, ಹೆಬ್ಬಟ್ ರಾಮಕ್ಕ ಸಿನಿಮಾ ಒಳ್ಳೆಯ ಅರ್ಥ ಪೂರ್ಣ ಹಾಗೂ ಮಹಿಳಾ ಪ್ರಧಾನ ಚಿತ್ರವಾಗಿದೆ. ಈ ಚಿತ್ರದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಧಾನ್ಯತೆ ಜೊತೆ ಹೆಚ್ಚು ಹೆಚ್ಚು ಮಹಿಳೆಯರು ರಾಜಕೀಯಕ್ಕೆ ಬರಬೇಕು ಎಂಬ ಬಗ್ಗೆ ಸಂದೇಶ ಸಾರುವ ಅಂಶಗಳಿವೆ ಎಂದರು.