ಮಲಯಾಳಂನ ಖಾತ್ಯ ನಟ ಗೋವಾದಲ್ಲಿ ನಿಗೂಢ ಸಾವು

ಮಲಯಾಳಂನ ಖಾತ್ಯ ನಟ ಗೋವಾದಲ್ಲಿ ನಿಗೂಢ ಸಾವು

HSA   ¦    Jan 16, 2018 07:06:47 PM (IST)
ಮಲಯಾಳಂನ ಖಾತ್ಯ ನಟ ಗೋವಾದಲ್ಲಿ ನಿಗೂಢ ಸಾವು

ಪಣಜಿ: ಮಲಯಾಳಂ ನಟ ಸಿಧು ಆರ್. ಪಿಳ್ಳೈ ಅವರು ಗೋವಾ ಪ್ರವಾಸದ ವೇಳೆ ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.

ಸಿಧು ಅವರು ಜ.12ರಂದು ಗೋವಾ ಪ್ರವಾಸಕ್ಕೆ ತೆರಳಿದ್ದರು. ಸೋಮವಾರ ಅವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ವರದಿಗಳು ಹೇಳಿವೆ. ಆದರೆ ಇದುವರೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸಿಧು ಅವರು ಸಹನಟನಾಗಿ ಸುಮಾರು 16ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿಧು ಅವರು ಸೆಕೆಂಡ್ ಶೋ, ಚಿತ್ರಮ್, ವದನಮ್, ಅಮೃತಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಿಧು ಪಿಳ್ಳೈ ಅವರು ಜನಪ್ರಿಯ ಚಿತ್ರ ನಿರ್ಮಾಪಕ ಪಿಕೆಆರ್ ಪಿಳ್ಳೈ ಅವರ ಮಗ.