ಅಕ್ರಮ ಶಸ್ತ್ರಾಸ್ತ್ರ ದಂಧೆ: ಸರ್ಕಾರ್ ಚಿತ್ರದ ನಾಯಕ ಅರೆಸ್ಟ್

ಅಕ್ರಮ ಶಸ್ತ್ರಾಸ್ತ್ರ ದಂಧೆ: ಸರ್ಕಾರ್ ಚಿತ್ರದ ನಾಯಕ ಅರೆಸ್ಟ್

YK   ¦    Nov 05, 2018 12:04:28 PM (IST)
ಅಕ್ರಮ ಶಸ್ತ್ರಾಸ್ತ್ರ ದಂಧೆ: ಸರ್ಕಾರ್ ಚಿತ್ರದ ನಾಯಕ ಅರೆಸ್ಟ್

ಬೆಂಗಳೂರು: ಅಕ್ರಮವಾಗಿ ರಿವಾಲ್ವರ್ ಸೇರಿದಂತೆ ಬುಲೆಟ್ ನ್ನು ಮಾರಾಟ  ಮಾಡುತ್ತಿದ್ದ ಸರ್ಕಾರ ಚಿತ್ರದ ನಾಯಕ ಜಗದೀಶ್ ಸೇರಿದಂತೆ ಮೂವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಟನನ್ನು ಜಗದೀಶ್ ಎಸ್. ಹೊಸಪೇಟೆ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ರಿವಾಲ್ವರ್ ಹಾಗೂ 21 ಬುಲೆಟ್ ನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಬಂಧಿಯ ನಟ ಜಗದೀಶ್ ಅವರ ನಟನೆಯ ಸರ್ಕಾರ ಚಿತ್ರ ಚಂದನವನದಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಆ ಬಳಿಕ ಅವರು ಅಕ್ರಮವಾಗಿ ರಿವಾಲ್ವರ್ ನ್ನು ಮಾರಾಟ ಮಾಡುವ ಜಾಲದೊಂದಿಗೆ ಸೇರಿಕೊಂಡಿದ್ದಾರೆ.

ಈಚೆಗೆ ಹುಬ್ಬಳ್ಳಿಯಿಂದ ಕಳುಹಿಸಲಾಗಿದ್ದ ಕೋರಿಯರ್ ನಲ್ಲಿ ಬುಲೆಟ್ ಪತ್ತೆಯಾಗಿತ್ತು. ಇದನ್ನು ತನಿಖೆ ಮಾಡಲು ಹೊರಟ ಪೊಲೀಸರಿಗೆ ಅಕ್ರಮವಾಗಿ ರಿವಾಲ್ವರ್ ಹಾಗೂ ಬುಲೆಟ್ ಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ವೇಳೆ ಜಗದೀಶ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.