ಮುರಿದು ಬಿತ್ತಾ ರಶ್ಮಿಕಾ- ರಕ್ಷಿತ್ ಸಂಬಂಧ?

ಮುರಿದು ಬಿತ್ತಾ ರಶ್ಮಿಕಾ- ರಕ್ಷಿತ್ ಸಂಬಂಧ?

YK   ¦    Sep 10, 2018 03:17:11 PM (IST)
ಮುರಿದು ಬಿತ್ತಾ ರಶ್ಮಿಕಾ- ರಕ್ಷಿತ್ ಸಂಬಂಧ?

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ನಡುವಿನ ಸಂಬಂಧ ಮುರಿದು ಬಿತ್ತು ಎಂಬ ಊಹಾಪೋಹಗಳು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದಕ್ಕೆ ರಶ್ಮಿಕಾ ಅವರೇ 'ಅದು ಸುಳ್ಳು ಸುದ್ದಿ ಎಂದ ಹೇಳಿ ಫೇಸ್ ಬುಕ್ ಪುಟದಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ‘ನಮ್ಮ ನಡುವಿನ ಸಂಬಂಧಕ್ಕೆ ಧಕ್ಕೆಯಾಗಿಲ್ಲ’ ಎಂದು ಹೇಳಿದ್ದರು. ಇದಕ್ಕೆ ರಶ್ಮಿಕಾ ಕೂಡ ಸ್ಪಷ್ಟನೆಯನ್ನು ನೀಡಿದರು,

ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಇಬ್ಬರ ನಡುವಿನ ಪ್ರೇಮ ಸಂಬಂಧ ಕೊನೆಗೊಂಡಿದೆ ಎಂದು ಆಪ್ತಮೂಲಗಳೇ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಬಣ್ಣದ ಬದುಕಿನ ಕಾರಣಗಳೇ ಸಂಬಂಧ ಮುರಿದು ಬೀಳಕ್ಕೆ ಕಾರಣಗಳು ಎಂದು ಹೇಳಲಾಗುತ್ತಿದೆ.

ಗೀತಗೋವಿಂದ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಅವರ ವೃತ್ತಿಬದುಕಿನಲ್ಲಿ ಮೇಲೇರಿದೆ. ಚಿತ್ರದಲ್ಲಿ ರಶ್ಮಿಕ ಮಂದಣ್ಣ ಹಾಗೂ ವಿಜಯ ದೇವರಕೊಂಡ ಜತೆಗಿನ ಕೆಮಿಸ್ಟ್ರಿ ಕಂಡು ಕೆಲವರು ಟ್ರೋಲ್ ಮಾಡಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕ ಹಾಗೂ ರಕ್ಷಿತ್ ನಡುವಿನ ಸಂಬಂಧ ಮುರಿದು ಬಿತ್ತು ಎನ್ನಲಾಗಿದೆ.

ನಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು. ಈ ವೇಳೆ ನಟ ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರು ಪ್ರೀತಿಯಲ್ಲಿ ಬಿದ್ದು, 2017 ಜುಲೈ 3ರಂದು ಇಬ್ಬರು ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಆ ಬಳಿಕ ರಶ್ಮಿಕಾ ಕನ್ನಡ ಸ್ಟಾರ್ ನಟರ ಜತೆ ನಟಿಸಿ, ತೆಲುಗು ಚಿತ್ರರಂಗದತ್ತ ಹೋಗಿದ್ದರು. ತೆಲುಗಿನ ಗೀತಗೋವಿಂದ ಚಿತ್ರದ ಬಳಿಕ ರಶ್ಮಿಕಾ ಮತ್ತು ರಕ್ಷಿತ್ ದೂರವಾಗುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು.

ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರತಿಕ್ರಿಯೇ ನೀಡಿಲ್ಲ. ರಕ್ಷಿತ್ ಶೆಟ್ಟಿ ಈಚೆಗೆ ಸಾಮಾಜಿಕ ಜಾಲತಾಣದಿಂದ ದೂರ ಸರಿದು ಟ್ವಿಟರ್ ಖಾತೆಯನ್ನೂ ಡಿಲೀಟ್ ಮಾಡಿದ್ದಾರೆ. ಈ ಸಂಬಂಧ ರಶ್ಮಿಕಾ ಕುಟುಂಬದವರು 'ವೈಯ್ಯಕ್ತಿಕ ವಿಚಾರದ ಕುರಿತು ಏನೂ ಹೇಳಲಾಗುವುದಿಲ್ಲ' ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

More Images