ಬಾಲಿವುಡ್ ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್

ಬಾಲಿವುಡ್ ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್

HSA   ¦    Jul 05, 2018 02:48:40 PM (IST)
ಬಾಲಿವುಡ್ ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್

ನವದೆಹಲಿ: ಬಾಲಿವುಡ್ ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿದ್ದು, ಇದು ನಿಜವೆಂದು ದೃಢಪಡಿಸಲಾಗಿದೆ.

ಸೋನಾಲಿ ಬೇಂದ್ರೆ ಅವರಿಗೆ ಉನ್ನತ ವರ್ಗದ ಕ್ಯಾನ್ಸರ್ ಪತ್ತೆಯಾಗಿದೆ ಮತ್ತು ಇದು ಪಸರಿಸುತ್ತಿದೆ ಎಂದು ಸೋನಾಲಿ ಬೇಂದ್ರೆ ಅವರ ನಾದಿನಿ ತಿಳಿಸಿದ್ದಾರೆ.

ಇದು ಹಠಾತ್ ಆಗಿ ನಡೆದಿದೆ. ಕೆಲವೊಂದು ವಿಷಯಗಳು ಹಠಾತ್ ಆಗಿ ನಡೆಯುತ್ತದೆ. ಸೋನಾಲಿ ಹೋರಾಟಗಾರ್ತಿ. ಆಕೆ ಖಂಡಿತವಾಗಿಯೂ ಇದರಿಂದ ಮೇಲೆದ್ದು ಬರಲಿರುವಳು. ಆಕೆಯಲ್ಲಿ ಧನಾತ್ಮಕ ಶಕ್ತಿಯಿದೆ. ನಾವೆಲ್ಲರೂ ಆಕೆ ಗುಣಮುಖವಾಗಲೆಂದು ಹಾರೈಸುವ ಎಂದು ಸೋನಾಲಿ ಅವರ ನಾದಿನಿ ಸೃಷ್ಟಿ ಆರ್ಯ ತಿಳಿಸಿದ್ದಾರೆ.

ಹಲವಾರು ಬಾಲಿವುಡ್ ನಟನಟಿಯರು ಸೋನಾಲಿಗೆ ಧೈರ್ಯ ತುಂಬಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು ಸೋನಾಲಿ ಬೇಂದ್ರೆ ಅವರನ್ನು ಮುಖತಃ ಭೇಟಿಯಾಗಿ ಧೈರ್ಯ ತುಂಬಿದ್ದಾರೆ ಎಂದು ವರದಿಗಳು ಹೇಳಿವೆ.