ಮೊದಲ ಬಾರಿ ಯಶ್ ಕಣ್ಣೀರು: ರಾಧಿಕಾ ಪಂಡಿತ್

ಮೊದಲ ಬಾರಿ ಯಶ್ ಕಣ್ಣೀರು: ರಾಧಿಕಾ ಪಂಡಿತ್

YK   ¦    Aug 27, 2019 03:18:39 PM (IST)
ಮೊದಲ ಬಾರಿ ಯಶ್ ಕಣ್ಣೀರು: ರಾಧಿಕಾ ಪಂಡಿತ್

ಬೆಂಗಳೂರು: ಯಾವುದಕ್ಕೂ ಎದೆಗುಂದದ ರಾಕಿಂಗ್ ಸ್ಟಾರ್ ಯಶ್ ಮೊದಲ ಭಾರೀ ಕಣ್ಣೀರು ಸುರಿಸಿದ್ದಾರೆ ಎಂದು ಪತ್ನಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

ಇಷ್ಟಕ್ಕೂ ಯಶ್ ಕಣ್ಣೀರು ಹಾಕಿದ್ದು ಮಗಳು ನೋವನ್ನು ಸಹಿಲಸಾಗದೆ. ಇಂದು ಯಶ್-ರಾಧಿಕಾ ದಂಪತಿ ತಮ್ಮ ಮಗಳು ಐರಾ ಕಿವಿ ಚುಚ್ಚಿಸುವ ಶಾಸ್ತ್ರವನ್ನು ಮಾಡಿದ್ದಾರೆ.

 
 
 
View this post on Instagram

A post shared by Radhika Pandit (@iamradhikapandit) on

ಇದೊಂದು ಪದ್ಧತಿಯಾದರೂ ಪೋಷಕರಿಗೆ ಅದನ್ನು ನೋಡುವುದೇ ಕಷ್ಟ. ಈ ವೇಳೆ ಮಗಳು ಐರಾ ಜೋರಾಗಿ ಅಂತಿದ್ದಾಳೆ. ಇದನ್ನು ನೋಡಲಾಗದೆ ಯಶ್ ಅವರು ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ಎಷ್ಟೊಂದು ಅತ್ಯಮೂಲ್ಯವಾದದ್ದೂ ಅಲ್ವ.ಇದೀಗ ತಂದೆ –ಮಗಳು ಆರಾಮಾಗಿದ್ದಾರೆ, ಚಿಂತಿಸಬೇಡಿ ಎಂದು ಬರೆದುಕೊಂಡಿದ್ದಾರೆ.