ಸ್ಯಾಂಡಲ್ ವುಡ್ ನಟರ ಆಡಿಟರ್ ಮನೆ ಮೇಲೆ ಐಟಿ ದಾಳಿ

ಸ್ಯಾಂಡಲ್ ವುಡ್ ನಟರ ಆಡಿಟರ್ ಮನೆ ಮೇಲೆ ಐಟಿ ದಾಳಿ

YK   ¦    Jan 11, 2019 03:27:44 PM (IST)
ಸ್ಯಾಂಡಲ್ ವುಡ್ ನಟರ ಆಡಿಟರ್ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ನಟ ಯಶ್ ಮನೆ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಗುರುವಾರ ಆದಾಯ ತೆರಿಗೆ ಅಧಿಕಾರಿಗಳು ಅವರ ಆಡಿಟರ್ ಮನೆ ಮೇಲೆ ದಿಡೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅದಲ್ಲದೆ ಸ್ಯಾಂಡಲ್ ವುಡ್ ನ ನಟ- ನಟಿಯರು ಹಾಗೂ ನಿರ್ಮಾಪಕರ ಆಡಿಟರ್ ಮನೆ ಮೇಲೂ ದಾಳಿ ನಡೆಸಲಾಗಿದೆ.

ಗುರುವಾರ ಸಂಜೆ 6 ಗಂಟೆಗೆ ಖಾಸಗಿ ವಾಹನದಲ್ಲಿ ಬಂದ 9 ಜನ ಐಟಿ ಅಧಿಕಾರಿಗಳು  ಯಶ್ ಆಡಿಟರ್ ಮನೆ ಮೇಲೆ ದಾಳಿ ನಡೆಸಿದ 5 ಗಂಟೆಗಳ ತಪಾಸಣೆ ನಡೆಸಿ ವಿಚಾರಣೆ ನಡೆಸಿದ್ದಾರೆ. ಮಹತ್ವದ ದಾಖಲೆಗಳನ್ನು ಪಡೆದು ತೆರಳಿದ್ದಾರೆ.